ಕರ್ನಾಟಕ

karnataka

ETV Bharat / state

4 ಮನೆ ನೋಡಲು ಇಲ್ಲಿಗೆ ಬರಬೇಕಿತ್ತಾ?... ಅಧಿಕಾರಿಗಳ ವಿರುದ್ಧ ನಿರಾಶ್ರಿತರು ಗರಂ - ನಿರಾಶ್ರಿತರ ಬೇಸರ

ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳ ಪರಿಶೀಲನೆಗೆ ಬಂದಿದ್ದ ಕೇಂದ್ರ ತಂಡದ ಅಧಿಕಾರಿಗಳು ಹಾಗೂ ಸ್ಥಳೀಯ ಶಾಸಕರ ವಿರುದ್ಧ ನಿರಾಶ್ರಿತರು ಬೇಸರ ವ್ಯಕ್ತಪಡಿಸಿದ್ದಾರೆ.

ಕೊಡಗಿಗೆ ಕೇಂದ್ರ ಅಧ್ಯಯನ ತಂಡ ಭೇಟಿ

By

Published : Aug 27, 2019, 11:25 PM IST

Updated : Aug 28, 2019, 4:59 AM IST

ಕೊಡಗು:ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳ ಪರಿಶೀಲನೆಗೆ ಬಂದಿದ್ದ ಕೇಂದ್ರ ತಂಡದ ಅಧಿಕಾರಿಗಳು ಹಾಗೂ ಸ್ಥಳೀಯ ಶಾಸಕರ ವಿರುದ್ಧ ನಿರಾಶ್ರಿತರು ಬೇಸರ ವ್ಯಕ್ತಪಡಿಸಿದ್ದಾರೆ.

ವಿರಾಜಪೇಟೆ ತಾಲೂಕಿನ ಕರಡಿಗೋಡು ಗ್ರಾಮಕ್ಕೆ ಭೇಟಿ ನೀಡಿದ ಅಧಿಕಾರಿಗಳು ಮತ್ತು ಸ್ಥಳೀಯ ಶಾಸಕರ ವಿರುದ್ದ ಸ್ಥಳೀಯ ಸಂತ್ರಸ್ತರು ಬೇಸರ ವ್ಯಕ್ತಪಡಿಸಿದ್ದು, ನಾಲ್ಕು ಮನೆ ನೋಡಲು ಬೆಂಗಳೂರಿನಿಂದ ಇವರು ಇಲ್ಲಿಗೆ ಬರಬೇಕಿತ್ತಾ, ನಾವೇ ಬೇಕಿದ್ರೆ ಇವರಿಗೆಲ್ಲಾ ಇಲ್ಲಿನ ಫೋಟೋ ತೆಗೆದು ಕಳುಹಿಸಿ ಕೊಡ್ತಿದ್ವಿ ಎಂದು ಸಿಡಿಮಿಡಿಗೊಂಡರು.

ಕೇಂದ್ರ ಅಧ್ಯಯನ ತಂಡ ಅಧಿಕಾರಿಗಳ ವಿರುದ್ಧ ನಿರಾಶ್ರಿತರ ಬೇಸರ

ಇದನ್ನು ಓದಿ:ಕೇಂದ್ರ ಅಧ್ಯಯನ ತ‌ಂಡದೆದುರು ಪ್ರವಾಹದ ಭೀಕರತೆ ತೆರೆದಿಟ್ಟ ಕೊಡಗು ಸಂತ್ರಸ್ತರು

ಹಾಗೆಯೇ ಕೇಂದ್ರ ಅಧಿಕಾರಿಗಳ ತಂಡದ ಭೇಟಿಯಿಂದ ಅಂತರ ಕಾಯ್ದುಕೊಂಡ ಶಾಸಕರು ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ.ಇದರಿಂದ ಶಾಸಕರ ನಡೆಗೂ ಜನತೆ ಆಕ್ರೋಶ ವ್ಯಕ್ತಪಡಿಸಿದರು‌. ಅಧ್ಯಯನ ತಂಡದ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಅನೀಸ್ ಕೆ. ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನಾ ಡಿ.ಪೆನ್ನೇಕರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಲಕ್ಷ್ಮಿಪ್ರಿಯಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಾಥ್ ನೀಡಿದ್ದರು.‌

Last Updated : Aug 28, 2019, 4:59 AM IST

ABOUT THE AUTHOR

...view details