ಕೊಡಗು:ಜಿಲ್ಲೆಯಲ್ಲಿ ಭಾರಿ ಗಾಳಿ, ಮಳೆಗೆ ಹಲವು ಅವಾಂತರಗಳು ಸಂಭವಿಸಿವೆ. ಕುಶಾಲನಗರ ತಾಲೂಕಿನ ಕೂಡಿಗೆ ಸಮೀಪದ ಮೂಡಲ ಕುಪ್ಪೆ ಗ್ರಾಮದ ಚಂದ್ರಪ್ಪ ಎಂಬುವವರಿಗೆೆ ಸೇರಿದ ಮನೆ ಕುಸಿದಿದೆ. ಮನೆಗೋಡೆ ಬಿರುಕು ಬಿಟ್ಟು ಶಬ್ದ ಕೇಳಿಬಂದಾಗ ಮನೆಯಲ್ಲಿದ್ದವರು ಹೊರಗೋಡಿ ಬಂದಿದ್ದಾರೆ. ನಂತರ ಮನೆ ಗೋಡೆಗಳು, ಹಂಚುಗಳು ಕುಸಿದು ಬಿದ್ದಿವೆ. ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ.
ಕೊಡಗಿನಲ್ಲಿ ಮುಂದುವರೆದ ಮಳೆ ಅಬ್ಬರ: ಮನೆಗಳಿಗೆ ಹಾನಿ, ರಸ್ತೆಗಳು ಜಲಾವೃತ - ಕೊಡಗಿನಲ್ಲಿ ಮಳೆಯ ಅಬ್ಬರ ರಸ್ತೆಗಳು ಜಲಾವೃತ
ಕೊಡಗಿನಲ್ಲಿ ಮಳೆರಾಯನ ಅಬ್ಬರ ಮುಂದುವರೆದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮನೆ, ಮರಗಳು ನೆಲಕ್ಕುರುಳಿವೆ.
ಮನೆ ಕುಸಿತ, ರಸ್ತೆಗಳು ಜಲಾವೃತ
ವಿರಾಜಪೇಟೆ ತಾಲೂಕಿನ ಗೊಂಡಗೇರಿ ಗ್ರಾಮದ ಪಕ್ಕದಲ್ಲಿ ಕಾವೇರಿ ನದಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಗೊಂಡಗೇರಿಯಿಂದ ವಿರಾಜಪೇಟೆ ಮತ್ತು ಗೋಣಿಕೊಪ್ಪಕ್ಕೆ ತೆರಳುವ ರಸ್ತೆ ಬಂದ್ ಆಗಿದೆ. ವಿದ್ಯಾರ್ಥಿಗಳು ಹಾಗೂ ಕೂಲಿ ಕಾರ್ಮಿಕರಿಗೆ ತೊಂದರೆಯಾಗಿದೆ. ಕಾವೇರಿ ನದಿಯಲ್ಲಿ ಪ್ರವಾಹ ಹೆಚ್ಚಾಗಿ ಕಾಫಿ ತೋಟಕ್ಕೆ ನೀರು ನುಗ್ಗಿದ್ದು, ಬೆಳೆ ನಾಶವಾಗಿದೆ.
ಇದನ್ನೂ ಓದಿ:ಕೊಡಗು: ಜಲಾವೃತವಾದ ರಸ್ತೆ ಮಧ್ಯೆ ಸಿಲುಕಿದ ಜೀಪ್ ರಕ್ಷಣೆ