ಕೊಡಗು: ಅಕಾಲಿಕ ಮಳೆಯಿಂದ ಬೆಳೆ ಹಾನಿಯಾಗಿರುವ ಪ್ರದೇಶಗಳಿಗೆ ಕಂದಾಯ ಸಚಿವ ಆರ್.ಅಶೋಕ್(R. Ashok, Minister of Revenue )ಭೇಟಿ ನೀಡಿ ಪರಿಶೀಲಿಸಿದರು.
ಕುಶಾಲನಗರ ತಾಲೂಕಿನ ಹೆಬ್ಬಾಲೆ ಗ್ರಾಮ ಪಂಚಾಯತ್ ( Hebbale Gram Panchayat of Kushalanagar Taluk ) ವ್ಯಾಪ್ತಿಯ ಮರೂರು ಗ್ರಾಮದಲ್ಲಿ ಮುಸುಕಿನ ಜೋಳ ಮತ್ತು ಶುಂಟಿ ಬೆಳೆ ಹಾನಿಯಾಗಿರುವುದನ್ನು ವೀಕ್ಷಿಸಿದರು. ಬಳಿಕ ಕುಶಾಲನಗರದಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ನಂತರ ಮಾತನಾಡಿದ ಅವರ, ರಾಜ್ಯದಲ್ಲಿ ಅಕಾಲಿಕ ಮಳೆಯಾಗಿಬೆಳೆ ಹಾನಿ ಆಗಿರುವುದರಿಂದ ಚುನಾವಣಾ ಆಯೋಗವು ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಲು ಅನುಮತಿ ನೀಡಿದೆ. ಆ ನಿಟ್ಟಿನಲ್ಲಿ ಕೊಡಗು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಭೇಟಿ ನೀಡಿ ವೀಕ್ಷಣೆ ಮಾಡಲಾಗುತ್ತಿದೆ ಎಂದರು.
ಆರ್.ಅಶೋಕ್ ಅವರಿಂದ ಪರಿಶೀಲನೆ ಅಕಾಲಿಕ ಮಳೆಯಿಂದಾಗಿಹೆಬ್ಬಾಲೆ ಗ್ರಾ.ಪಂ.ವ್ಯಾಪ್ತಿಯ ಮರೂರು ಗ್ರಾಮದಲ್ಲಿ ಮುಸುಕಿನ ಜೋಳ ಮತ್ತು ಶುಂಟಿ ಬೆಳೆ ಹಾನಿಯಾಗಿದೆ. ಮುಸುಕಿನ ಜೋಳ ಹೆಚ್ಚಿನ ಮಳೆಯಿಂದಾಗಿ ಮೊಳಕೆ ಬರುತ್ತಿದೆ. ಹಾಗೆಯೇ ಶುಂಟಿ ಬೆಳೆ ಕೊಳೆಯುತ್ತಿದೆ. ಈ ಹಿನ್ನೆಲೆ ಕೂಡಲೇ 15 ದಿನದೊಳಗೆ ಬೆಳೆ ಹಾನಿಯಾದ ಕೃಷಿಕರಿಗೆ ಪರಿಹಾರ ವಿತರಿಸಲು ನಿರ್ದೇಶನ ನೀಡಲಾಗಿದೆ ಎಂದು ಕಂದಾಯ ಸಚಿವರು ಹೇಳಿದರು.
ಇದನ್ನೂ ಓದಿ: ಕೋಲಾರ: ಮಳೆಪೀಡಿತ ಪ್ರದೇಶಗಳಿಗೆ ಸಿಎಂ ಭೇಟಿ, ಪರಿಹಾರದ ಭರವಸೆ
ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಭಾರಿ ಮಳೆಯಿಂದಾಗಿ 146 ಮನೆಗಳು ಹಾನಿಯಾಗಿದೆ. 40,878 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ, 22 ಜಾನುವಾರುಗಳ ಪ್ರಾಣ ಹಾನಿ, 10 ಜಾನುವಾರುಗಳ ಕೊಟ್ಟಿಗೆ ಹಾನಿ ಹಾಗೂ 127 ಕೋಟಿ ರೂ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಉಂಟಾಗಿದ್ದು, ಈಗಾಗಲೇ ಹಲವು ಹಾನಿ ಪ್ರಕರಣಕ್ಕೆ ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಪರಿಹಾರ ವಿತರಿಸಲಾಗಿದೆ. ಸದ್ಯ ಅಕಾಲಿಕ ಮಳೆಯಿಂದಹಾನಿಯಾಗಿರುವ ಬೆಳೆ ಹಾನಿಗೆ ಪರಿಹಾರ ಭರಿಸಲಾಗುವುದು ಎಂದು ತಿಳಿಸಿದರು.
ಬಳಿಕ ಸೋಮವಾರಪೇಟೆ ತಾಲೂಕಿನ ಬೇಳೂರು ಗ್ರಾಮದಲ್ಲಿ ಅಕಾಲಿಕ ಮಳೆಯಿಂದ ಕಾಫಿ ಬೆಳೆ ಹಾನಿಯಾಗಿರುವುದನ್ನು ಪರಿಶೀಲಿಸಿದರು. ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿ, ಅಕಾಲಿಕ ಮಳೆಯಿಂದ ಕಾಫಿ ಬೆಳೆ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದ್ದು, ಕಾಫಿ ಬೆಳೆ ಹಾನಿ ಸಂಬಂಧ ಮರು ಸರ್ವೆ ಮಾಡಿ 15 ದಿನದಲ್ಲಿ ವರದಿ ನೀಡಿ ಪರಿಹಾರ ವಿತರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.