ಕರ್ನಾಟಕ

karnataka

ETV Bharat / state

ಭಾರತೀಯ ಸೇನಾ ಯುದ್ಧ ವಿಮಾನ ಪೈಲಟ್​ ಆದ ಕೊಡಗಿನ ಯುವತಿ! - Punya from kodagu

ಚೆಂಬೆಬೆಳ್ಳೂರು ಮೂಲದ ಕೊಳುವಂಡ ಪಿ.ನಂಜಪ್ಪ ಹಾಗೂ ಅನುರಾಧ ನಂಜಪ್ಪ ದಂಪತಿ ಪುತ್ರಿ ಪುಣ್ಯ ನಂಜಪ್ಪ, ಭಾರತೀಯ ಸೇನೆಯ ಫೈಟರ್ ಜೆಟ್‍ನ ಪೈಲಟ್ ಆಗಿ ಆಯ್ಕೆಯಾಗಿದ್ದಾರೆ.

Punya
Punya

By

Published : Jul 1, 2020, 10:00 PM IST

ಮಡಿಕೇರಿ: ಕೊಡಗು ಮೂಲದ ಯುವತಿ ಪುಣ್ಯ ನಂಜಪ್ಪ ಭಾರತೀಯ ಸೇನೆಯ ಯುದ್ಧ ವಿಮಾನದ ಪೈಲಟ್ ಆಗಿ ಆಯ್ಕೆಯಾಗಿದ್ದಾರೆ.

ವಾಯುಸೇನೆಯಲ್ಲಿ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದ ಪುಣ್ಯ ಈಗ ವಾಯು ಸೇನೆಯ ಪೈಲಟ್ ಆಗಿ ಆಯ್ಕೆಯಾಗುವ ಮೂಲಕ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಮೂಲಕ ತಮ್ಮ ಬಾಲ್ಯದ ಕನಸನ್ನು ಸಾಕಾರಗೊಳಿಸಿಕೊಂಡಿದ್ದಾರೆ.

ಕೊಡಗಿನ ವಿರಾಜಪೇಟೆ ತಾಲೂಕಿನ ಚೆಂಬೆಬೆಳ್ಳೂರು ಮೂಲದ ಕೊಳುವಂಡ ಪಿ.ನಂಜಪ್ಪ ಹಾಗೂ ಅನುರಾಧ ನಂಜಪ್ಪ ದಂಪತಿ ಪುತ್ರಿ ಪುಣ್ಯ ನಂಜಪ್ಪ ಹುಟ್ಟಿ ಬೆಳೆದದ್ದು ಮೈಸೂರಿನಲ್ಲಿ. ತಾಯಿ ಅನುರಾಧ ವಿಜಯನಗರದಲ್ಲಿರುವ ಸೆಂಟ್ ಜೋಸೆಫ್ ಸೆಂಟ್ರಲ್ ಸ್ಕೂಲ್‍ನಲ್ಲಿ ಶಿಕ್ಷಕಿಯಾಗಿದ್ದಾರೆ. ನಿಧನರಾಗಿದ್ದ ತಂದೆ ನಂಜಪ್ಪ ಪ್ರಭಾ ಚಿತ್ರಮಂದಿರದ ಮ್ಯಾನೇಜರ್ ಆಗಿದ್ದರು.
ವಿಜಯನಗರದ ಸೆಂಟ್ ಜೋಸೆಫ್ ಸೆಂಟ್ರಲ್ ಸ್ಕೂಲ್‍ನಲ್ಲಿ ಹೈಸ್ಕೂಲ್‍ವರೆಗೆ ವಿದ್ಯಾಭ್ಯಾಸ ಮಾಡಿದ ಪುಣ್ಯ ನಂಜಪ್ಪ, ಸರಸ್ವತಿಪುರಂ ವಿಜಯ ವಿಠಲ ಶಾಲೆಯಲ್ಲಿ ಪಿಯುಸಿ, ಎನ್‍ಐಇ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.

ಪದವಿ ನಂತರ 2018ರ ಆ. 18ರಂದು ಭಾರತೀಯ ವಾಯುಪಡೆಯ ಸಾಮಾನ್ಯ ಪ್ರವೇಶ ಪರೀಕ್ಷೆ ಬರೆದಿದ್ದರು. ಫ್ಲೈಯಿಂಗ್ ಬ್ರಾಂಚ್, ಗ್ರೌಂಡ್ ಡ್ಯೂಟಿ, ಟೆಕ್ನಿಕಲ್, ನಾನ್ ಟೆಕ್ನಿಕಲ್, ಲಾಜಿಸ್ಟಿಕ್ಸ್, ಅಕೌಂಟ್ಸ್, ಎಜುಕೇಷನ್‌, ಮಿಟಿಯೋರಾಲಜಿ ವಿಭಾಗಗಳ ಒಟ್ಟು 114 ಹುದ್ದೆಗಳ ನೇಮಕಾತಿಗೆ ನಡೆಸಲಾಗಿದ್ದ ಪರೀಕ್ಷೆಯಲ್ಲಿ ಪುಣ್ಯ ನಂಜಪ್ಪ ಫ್ಲೈಯಿಂಗ್ ಬ್ರಾಂಚ್‍ಗೆ ಆಯ್ಕೆಯಾಗಿ ಕೆಲಸ ಮಾಡಿದ್ದರು. ಸದ್ಯ ಭಾರತೀಯ ಸೇನೆಯ ಫೈಟರ್ ಜೆಟ್‍ನ ಪೈಲಟ್ ಆಗಿ ಆಯ್ಕೆಯಾಗಿದ್ದಾರೆ.

ABOUT THE AUTHOR

...view details