ಕೊಡಗು ಜಿಲ್ಲೆಗೆ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾದ ಸುಸಜ್ಜಿತ ಆಸ್ಪತ್ರೆ ಬೇಕು ಎಂಬ ಕೂಗು ಎಲ್ಲರಿಂದ ಕೇಳಿ ಬರುತ್ತಿದೆ. ಹೀಗೊಂದು ಅಭಿಯಾನ ಸಾಮಾಜಿಕ ಜಾಲತಾಣದಲ್ಲಿ ಆರಂಭವಾಗಿದೆ. ಸಾಕಷ್ಟು ಸೆಲಬ್ರಿಟಿಗಳು ಇದಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಕೊಡಗು ಆಸ್ಪತ್ರೆ ಅಭಿಯಾನಕ್ಕೆ ಬಂತು ಪವರ್: ಟ್ವಿಟರ್ ಮೂಲಕ ಪುನೀತ್ ಬೆಂಬಲ - undefined
ಯೋಧರ ನಾಡು ಕೊಡಗು ಜಿಲ್ಲೆಗೆ ಹೈಟೆಕ್ ಆಸ್ಪತ್ರೆಯೊಂದರ ಅವಶ್ಯಕತೆ ಇದ್ದು, ಸಿಎಂ ಇದಕ್ಕೆ ಸ್ಪಂದಿಸಬೇಕು ಎಂಬ ಮನವಿ ಎಲ್ಲರಿಂದ ಕೇಳಿಬರುತ್ತಿದೆ. ಚಲನಚಿತ್ರ ನಟರೂ ಇದಕ್ಕೆ ಬೆಂಬಲ ಸೂಚಿಸಿದ್ದು, ಇದೀಗ ಪುನೀತ್ ರಾಜ್ಕುಮಾರ್ ಕೂಡಾ ತಮ್ಮ ಟ್ವಿಟರ್ ಮೂಲಕ ಈ ಅಭಿಯಾನಕ್ಕೆ ಸಾಥ್ ನೀಡಿದ್ದಾರೆ.
ರಶ್ಮಿಕಾ ಮಂದಣ್ಣ, ಹರ್ಷಿಕಾ ಪೂಣಚ್ಚ, ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್, ಕಿಚ್ಚ ಸುದೀಪ್ ಸೇರಿ ಕನ್ನಡ ಚಿತ್ರರಂಗವೇ ಕೊಡಗಿಗೆ ಎಮರ್ಜೆನ್ಸಿ ಆಸ್ಪತ್ರೆ ಅವಶ್ಯಕತೆ ಇದೆ ಎಂದು ಬೆಂಬಲಿಸಿದೆ. ಇದೀಗ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಕೂಡಾ ಇದರ ಬೆಂಬಲಕ್ಕೆ ನಿಂತಿದ್ದಾರೆ. ತಮ್ಮ ಟ್ವಿಟರ್ ಮೂಲಕ ಪವರ್ ಸ್ಟಾರ್ ಕೊಡಗಿಗೆ ಆಸ್ಪತ್ರೆ ಬೇಕು ಎಂದು ಮನವಿ ಮಾಡಿದ್ದಾರೆ. 'ವೀರರ ನಾಡು ಕೊಡಗು ನಮ್ಮ ನಿಮ್ಮೆಲ್ಲರ ಹೆಮ್ಮೆ, ಕೊಡಗಿನ ಪ್ರಕೃತಿಗೆ ಮನಸೋತು ಪ್ರಪಂಚದಾದ್ಯಂತ ಪ್ರವಾಸಿಗರು ಭೇಟಿ ನೀಡುತ್ತಾರೆ. ಕೊಡಗಿನಲ್ಲಿ ಒಂದು ಉತ್ತಮ ಅತ್ಯಾಧುನಿಕ ಹೈಟೆಕ್ ಆಸ್ಪತ್ರೆಯಾಗಬೇಕೆಂಬುದು ನನ್ನ ಮನವಿ. ಕೊಡಗಿನ ಜನತೆಗೆ ಹಾಗೂ ಪ್ರವಾಸಿಗರಿಗೆ ಒಂದು ಮೂಲ ಸೌಕರ್ಯ ಒದಗಿಸಿದಂತಾಗುತ್ತದೆ' ಎಂದು ಪುನೀತ್ ಟ್ವಿಟರ್ನಲ್ಲಿ ಮನವಿ ಮಾಡಿಕೊಳ್ಳುವ ಮೂಲಕ ಈ ಅಭಿನಯಾನಕ್ಕೆ ಕೈ ಜೋಡಿಸಿದ್ದಾರೆ.