ಕರ್ನಾಟಕ

karnataka

ETV Bharat / state

ಕೊಡಗಿನಲ್ಲಿ ಮಿತಿ ಮೀರಿದ ಹುಲಿ ಹಾವಳಿ: ನರಭಕ್ಷಕನ ಸೆರೆಗೆ ಆಗ್ರಹಿಸಿ ಬೀದಿಗಿಳಿದ ಜನ - ಕೊಡಗಿನಲ್ಲಿ ಹುಲಿ ದಾಳಿ

ಕೊಡಗು ಜಿಲ್ಲೆಯ ವಿವಿಧೆಡೆ ಸತತವಾಗಿ ಜನರ ಮೇಲೆ ಹುಲಿ ದಾಳಿ ನಡೆಸುತ್ತಿದ್ದು, ನರಭಕ್ಷಕ ಹುಲಿಯನ್ನು ಶೀಘ್ರದಲ್ಲಿ ಪತ್ತೆ ಹಚ್ಚಿ ಸೆರೆ ಹಿಡಿಯುವಂತೆ ಆಗ್ರಹಿಸಿ ಜನ ಬೀದಿಗಿಳಿದು ಪ್ರತಿಭಟನೆ ನಡೆಸಿದರು.

Protest demanding capture of tiger in Kodagu
ಹುಲಿ ಸೆರೆ ಹಿಡಿಯುವಂತೆ ಆಗ್ರಹಿಸಿ ಪ್ರತಿಭಟನೆ ನಡೆಯಿತು

By

Published : Mar 10, 2021, 9:16 PM IST

ಕೊಡಗು : ಮೂರು ಜನರನ್ನು ಬಲಿ‌ ಪಡೆದ ನರಭಕ್ಷಕ ಹುಲಿ‌ ಇನ್ನೂ ಪತ್ತೆಯಾಗಿಲ್ಲ, ಹುಲಿಯನ್ನು ಕೊಂದು ಹಾಕಿ ಇಲ್ಲ ನಮಗೆ ಕೊಲ್ಲುವುದಕ್ಕೆ ಅನುಮತಿ ಕೊಡಿ ಎಂದು ಅರಣ್ಯ ಇಲಾಖೆ ವಿರುದ್ದ ರೈತ ಸಂಘ ಮತ್ತು ಸ್ಥಳೀಯರು ಪೊನ್ನಂಪೇಟೆಯಲ್ಲಿ‌ ಆನೆಚೌಕುರು ಮುಖ್ಯ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ದಕ್ಷಿಣ ಕೊಡಗಿನಲ್ಲಿ ಹುಲಿ ಹಾವಳಿ ಮೀತಿ ಮೀರಿದ್ದು, ಜನತೆ ಭಯದಲ್ಲೆ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ‌. ಕಳೆದ 10 ದಿನಗಳ ಹಿಂದೆ ಪೊನ್ನಂಪೇಟೆ ತಾಲೂಕಿನ ಟಿ.ಶೆಟ್ಟಿಗೇರಿ ಗ್ರಾಮದಲ್ಲಿ ಇಬ್ಬರನ್ನು ಕೊಂದು ಹಾಕಿತ್ತು. ನಿನ್ನೆ ಒಬ್ಬರನ್ನು ಹುಲಿ ಬಲಿ ಪಡೆದಿದೆ. ಅದೇ ಸ್ಥಳದಲ್ಲಿ ಇನ್ನೊಬ್ಬರನ್ನು ಗಾಯಗೊಳಿಸಿದೆ. 15 ದಿನಗಳಿಂದ ಅರಣ್ಯ ಇಲಾಖೆ ಎಷ್ಟೇ ಹರ ಸಾಹಸಪಟ್ಟರೂ, ಕೂಡ ಹುಲಿಯ ಸುಳಿವೇ ಸಿಗುತ್ತಿಲ್ಲ. ಆದ್ದರಿಂದ ಇನ್ನೊಂದು ಅನಾಹುತ ನಡೆಯುವ‌ ಮುಂಚಿತವಾಗಿ ಹುಲಿಯನ್ನು ಹಿಡಿಯಿರಿ ಎಂದು ಜನ ಬೀದಿಗಿಳಿದು ಪ್ರತಿಭಟನೆಗೆ ನಡೆಸಿದರು. ಹುಲಿಯನ್ನು ಕೊಂದು ಹಾಕಿ, ಇಲ್ಲ ನಮಗೆ ಅನುಮತಿ ಕೊಡಿ. ‌ನಾವು ಕೊಲ್ಲುತ್ತೇವೆ ಎಂದರು.

ಹುಲಿ ಸೆರೆ ಹಿಡಿಯುವಂತೆ ಆಗ್ರಹಿಸಿ ಪ್ರತಿಭಟನೆ

ಜಿಲ್ಲೆಯ ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪ ಸುತ್ತಮುತ್ತ ಕಳೆದ ಕೆಲ ದಿನಗಳಿಂದ ಸತತವಾಗಿ ಹುಲಿ ಜನರು ಮತ್ತು ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿದೆ. ಪೊನ್ನಂಪೇಟೆ ತಾಲೂಕಿನ ಶ್ರಿಮಂಗಲ, ಕುಟ್ಟ, ಶೆಟ್ಟಿಗೇರಿ ಹರಿಹರ ಭಾಗದಲ್ಲಿ ಇಬ್ಬರನ್ನು ಹುಲಿ ಬಲಿ ಪಡೆದ ಬಳಿಕ ಜನ ಬೆಚ್ಚಿ ಬಿದ್ದಿದ್ದಾರೆ. ಐದು ದಿನಗಳಿಂದ ಹುಲಿ ‌ಸೆರೆಗೆ ಅರಣ್ಯ ಇಲಾಖೆ ಶೋಧ ಕಾರ್ಯ ನಡೆಸುತ್ತಿದೆ. ಆದರೂ ಹುಲಿ ಮಾತ್ರ ಪತ್ತೆಯಾಗಿಲ್ಲ.

ಹುಲಿ ಸೆರೆ ಕಾರ್ಯಾಚರಣೆ ಸ್ಥಳಕ್ಕೆ ಖುದ್ದು ಪಿಸಿಸಿಎಫ್ ವಿಜಯ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಲಹೆಗಳನ್ನು ನೀಡಿದ್ದಾರೆ. ಅಲ್ಲದೆ ಕಾರ್ಯಾಚರಣೆಗೆ ಶಾರ್ಪ್ ಶೂಟರ್​ ಕರೆಸಲಾಗಿದೆ. ಹಂತಕ‌ ಹುಲಿ‌ಯನ್ನು ಸೆರೆ ಹಿಡಿಯಲು ಇಲಾಖೆ ಎಲ್ಲಾ ರೀತಿಯಲ್ಲೂ ಪ್ರಯತ್ನಿಸುತ್ತಿದೆ. ಹುಲಿ ಸೆರೆಗಾಗಿ ನಮ್ಮ ಅಧಿಕಾರಿಗಳಿಗೆ ಎಲ್ಲಾ ರೀತಿಯ ಅಧಿಕಾರವನ್ನೂ ನೀಡಲಾಗಿದೆ. ಕಾರ್ಯಾಚರಣೆಗೆ ಮತ್ತಿಗೋಡು ಅರಣ್ಯದಿಂದ ಅಭಿಮನ್ಯು ನೇತೃತ್ವದಲ್ಲಿ 4 ಆನೆಗಳನ್ನು ಕರೆಸಲಾಗಿದೆ. ಆದಷ್ಟು ಶೀಘ್ರವಾಗಿ ಹುಲಿಯನ್ನು ಸೆರೆ ಹಿಡಿಯುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ABOUT THE AUTHOR

...view details