ಕೊಡಗು: ಜನವರಿ 15 ರಂದೇ ಸೆರಿನಿಟಿ ಹಾಲ್‌ನಲ್ಲಿ ನಡೆದಿದ್ದ ನಟಿ ರಶ್ಮಿಕಾ ಮಂದಣ್ಣರ ಖಾಸಗಿ ಕಾರ್ಯಕ್ರಮವೊಂದಕ್ಕೆ ಐಟಿ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು ಎನ್ನಲಾಗಿದೆ.
ದಾಳಿಗೆ ಪೂರ್ವ ನಿಯೋಜಿತ ಸಿದ್ಧತೆ: ಅತಿಥಿಗಳಂತೆ ಮದುವೆಗೆ ಬಂದು ಹೋಗಿದ್ದ ಐಟಿ ಅಧಿಕಾರಿಗಳು..! - kodagu latest news
ಜನವರಿ 15 ರಂದೇ ಸೆರಿನಿಟಿ ಹಾಲ್‌ನಲ್ಲಿ ನಡೆದಿದ್ದ ನಟಿ ರಶ್ಮಿಕಾ ಮಂದಣ್ಣರ ಖಾಸಗಿ ಕಾರ್ಯಕ್ರಮವೊಂದಕ್ಕೆ ಐಟಿ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.
ದಾಳಿಗೆ ಪೂರ್ವ ನಿಯೋಜಿತ ಸಿದ್ಧತೆ: ಅತಿಥಿಗಳಂತೆ ಮದುವೆಗೆ ಬಂದು ಹೋಗಿದ್ದ ಐಟಿ ಅಧಿಕಾರಿಗಳು..!
ದಾಳಿಗೂ ಮೊದಲು, ಯಾರಿಗೂ ಸಹ ಅನುಮಾನ ಬಾರದಂತೆ ಐಟಿ ಟೀಂ ಪೂರ್ವಯೋಜಿತ ಸಿದ್ಧತೆ ನಡೆಸಿತ್ತು. ಸೆರಿನಿಟಿ ಹಾಲ್‌ನಲ್ಲಿ ಜನವರಿ 15 ರಂದು ನಡೆದಿದ್ದ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಪಸ್ ಆಗಿದ್ದರು ಎನ್ನಲಾಗಿದೆ.
ನಿನ್ನೆ ತೆಲಂಗಾಣ ಹಾಗೂ ಆಂಧ್ರಪ್ರದೇಶದಿಂದ 4 ಕಾರುಗಳಲ್ಲಿ ಬಂದಿದ್ದ ಅಧಿಕಾರಿಗಳು ನಾವು ದೂರದಿಂದ ಬಂದಿದ್ದೇವೆ. ನಾವು ನಟಿ ರಶ್ಮಿಕಾ ಅವರ ಅಭಿಮಾನಿಗಳು ಎಂದು ಮನೆಗೆ ಪ್ರವೇಶಿಸಿದ್ದರು.