ಕೊಡಗು:ಬಿಜೆಪಿ ಕಾರ್ಯಕರ್ತಪ್ರವೀಣ್ ನೆಟ್ಟಾರು ಹತ್ಯೆ ಮಾಡಿದ ಆರೋಪಿಗಳಿಗಾಗಿ ಎನ್ಐಎ ತಂಡ ತೀವ್ರ ಹುಡುಕಾಟ ನಡೆಸಿದೆ. ಆರೋಪಿಗಳ ಸುಳಿವು ಸಿಗದ ಹಿನ್ನೆಲೆಯಲ್ಲಿ ಎನ್ಐಎ ನಾಲ್ವರ ವಾಂಟೆಂಡ್ ಲಿಸ್ಟ್ ರೀಲಿಸ್ ಮಾಡಿದೆ. ಅದರಲ್ಲಿ ಕೊಡಗು ಮೂಲದ ತೂಫೈಲ್ ಎಂಬ ಓರ್ವ ಆರೋಪಿದ್ದು ಆತನಿಗಾಗಿ ತೀವ್ರ ಶೋಧ ನಡೆಸಿದ್ದಾರೆ.
ಮೂಲತಃ ಮಡಿಕೇರಿಯ ಗದ್ದಿಗೆಯ ನಿವಾಸಿಯಾಗಿರುವ ತುಫೈಲ್, ನೆಟ್ಟಾರು ಹತ್ಯೆ ಮಾಡಿದ ದಿನ ಆರೋಪಿಗಳಿಗೆ ಉಳಿದುಕೊಳ್ಳಲು ವಸತಿ ವ್ಯವಸ್ಥೆ ಮಾಡಿದ್ದ ಎಂಬ ಆರೋಪ ಇದೆ. ಹೀಗಾಗಿ ಈತನಿಗಾಗಿಯೂ ಪೊಲೀಸರು ಶೋಧನೆ ನಡೆಸುತ್ತಿದ್ದಾರೆ.
ಅಲ್ಲದೇ ಈತ ನಿಷೇಧಿತ ಸಂಘಟನೆ ಪಿಎಫ್ಐ (Popular Front of India) ಸಂಘಟನೆಯಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಎನ್ನಲಾಗುತ್ತಿದೆ. ಹೀಗಾಗಿ ತುಫೈಲ್ನನ್ನು ಹುಡುಕಿಕೊಂಡು ಎನ್ಐಎ ತಂಡ ಸೆಪ್ಟೆಂಬರ್ನಲ್ಲಿ ಎರಡು ಭಾರಿ ಕೊಡಗಿಗೆ ಬಂದು ಬಂದಿತ್ತು. ಅದೇ ತಿಂಗಳ 6 ಮತ್ತು 22 ರಂದು ಕೊಡಗಿಗೆ ಭೇಟಿಕೊಟ್ಟ ತಂಡ, ತುಫೈಲ್ ಮನೆ ಸೇರಿದಂತೆ ಮಡಿಕೇರಿಯ ಸಾಕಷ್ಟು ಸ್ಥಳಗಲ್ಲಿ ಹುಡುಕಾಟ ನಡೆಸಿತ್ತು. ಆದರೆ ಅಧಿಕಾರಿಗಳಿಗೆ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ. ಕಳೆದ ಹಲವು ದಿನಗಳಿಂದ ಆರೋಪಿಗಳ ಪತ್ತೆಯಾಗದ ಹಿನ್ನೆಲೆ ಇದೀಗ ಎನ್ಐಎ ತಂಡ ತುಫೈಲ್ ಸೇರಿದಂತೆ ನಾಲ್ಕು ಜನರ ವಾಂಟೆಂಡ್ ಲಿಸ್ಟ್ ರೀಲಿಸ್ ಮಾಡಿದೆ.