ಕೊಡಗು :ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯ ಕುರಿತು ಕೊಡಗಿನಲ್ಲಿ ಸಚಿವ ಪ್ರಭು ಚೌಹಾಣ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಮಹಾರಾಷ್ಟ್ರದಲ್ಲಿ 30 ವರ್ಷದಿಂದ ಬಿಜೆಪಿ, ಶಿವಸೇನೆ ಮೈತ್ರಿಯಲ್ಲಿದ್ದವು.
ಆದರೆ, ಉದ್ದವ್ ಠಾಕ್ರೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಾಂಗ್ರೆಸ್ನೊಂದಿಗೆ ಮೈತ್ರಿ ಮಾಡಿಕೊಂಡರು. ಸರ್ಕಾರದಲ್ಲಿನ ಹಿಂದುತ್ವ ವಿರೋಧಿ ವಿಚಾರಗಳಿಂದಾಗಿ ಎಂಎಲ್ಎಗಳು ಏಕನಾಥ ಶಿಂಧೆ ಜೊತೆ ಹೊರಗೆ ಬಂದಿದ್ದಾರೆ ಎಂದರು.
ಹಿಂದುತ್ವ ವಿರೋಧಿ ಆಡಳಿತವನ್ನ ವಿರೋಧಿಸಿ ಶಿಂಧೆ ಹೊರಬಂದಿರುವುದು ಅಂತಾ ಸಚಿವ ಪ್ರಭು ಚೌಹಾಣ್ ಹೇಳಿರುವುದು.. ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಇದ್ದಾಗ ಹೇಗೆ ಕೆಲಸಗಳು ಆಗುತ್ತಿರಲಿಲ್ಲವೋ ಹಾಗೆ ಅಲ್ಲಿಯೂ ಆಗಿದೆ. ಬಿಜೆಪಿ ಯಾವುದೇ ಆಪರೇಷನ್ ಕಮಲ ಮಾಡುತ್ತಿಲ್ಲ ಎಂದರು. ಇದೇ ವೇಳೆ ಕೊಡಗಿನ ಪಶುಸಂಗೋಪನಾ, ಜಾನುವಾರು, ಹಂದಿ ಮತ್ತು ಕೋಳಿ ಸಾಕಾಣಿಕಾ ಕೇಂದ್ರಗಳನ್ನು ಪರಿಶೀಲಿಸಿದರು.
ಇದನ್ನೂ ಓದಿ :50 ಶಾಸಕರು ನಮ್ಮೊಂದಿಗಿದ್ದಾರೆ, ಶೀಘ್ರವೇ ಮುಂಬೈಗೆ ಹೋಗ್ತೀವಿ : ಏಕನಾಥ್ ಶಿಂಧೆ