ಕರ್ನಾಟಕ

karnataka

ETV Bharat / state

ಬುದ್ಧಿಮಾಂದ್ಯ ಮಗನ ಚಿಕಿತ್ಸೆಗೂ ಹಣವಿಲ್ಲದೇ ಪರದಾಡುತ್ತಿದೆ ದಿನಗೂಲಿ ಕುಟುಂಬ.. - ಕೊಡಗಿನಲ್ಲಿ ಲಾಕ್​ಡೌನ್​ ಆತಂಕ

ಗಾಯದ ಮೇಲೆ ಬರೆ ಎಳೆದಂತೆ ಲಾಕ್​ಡೌನ್​ ಎದುರಾಗಿದೆ. ಸದ್ಯ ಈ ಕುಟುಂಬಕ್ಕೆ ಒಂದು ಹೊತ್ತಿನ ಊಟಕ್ಕೂ ದಿಕ್ಕಿಲ್ಲದಾಗಿದೆ. ನ್ಯಾಯಬೆಲೆ ಅಂಗಡಿಯಿಂದ ಎರಡು ತಿಂಗಳಿಗೆ 20 ಕೆಜಿ ಅಕ್ಕಿ ನೀಡಿದ್ದಾರೆ.

poor family faced huge problems due to lock down
ಮಗನ ಚಿಕಿತ್ಸೆಗೆ ಹಣವಿಲ್ಲದೇ ಪರದಾಡುತ್ತಿರುವ ಕೂಲಿ ದಂಪತಿ

By

Published : May 7, 2020, 6:30 PM IST

ವಿರಾಜಪೇಟೆ (ಕೊಡಗು): ದಿನಗೂಲಿ ನಂಬಿ ಜೀವನ ಸಾಗಿಸುತ್ತಿದ್ದ ಕುಟುಂಬ ಲಾಕ್​ಡೌನ್​ನಿಂದ ಅತಂತ್ರವಾಗಿದೆ. ಇನ್ನೂ ಬುದ್ಧಮಾಂದ್ಯ ಮಗನ ಚಿಕಿತ್ಸೆಗೂ ಹಣವಿಲ್ಲದೇ ಕಂಬನಿ ಮಿಡಿಯುತ್ತಿದೆ.

ಮಗನ ಚಿಕಿತ್ಸೆಗೆ ಹಣವಿಲ್ಲದೇ ಪರದಾಡುತ್ತಿರುವ ದಂಪತಿ..

ವಿರಾಜಪೇಟೆ ತಾಲೂಕಿನ ಅವರೆಗುಂದ ಗ್ರಾಮದ ಹರೀಶ್ ಹಾಗೂ ಲೀಲಮ್ಮ ದಂಪತಿ ನಿತ್ಯವೂ ಕಣ್ಣೀರಲ್ಲಿ ಕೈತೊಳೆಯುತ್ತಿದೆ. ಇನ್ನೂ ಮನೆ ಜವಾಬ್ದಾರಿ ಹೊತ್ತ ಹರೀಶ್​ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈಗಾಗಲೇ ಶಸ್ತ್ರ ಚಿಕಿತ್ಸೆಗೂ ಒಳಗಾಗಿದ್ದಾರೆ.

ಗಾಯದ ಮೇಲೆ ಬರೆ ಎಳೆದಂತೆ ಲಾಕ್​ಡೌನ್​ ಎದುರಾಗಿದೆ. ಸದ್ಯ ಈ ಕುಟುಂಬಕ್ಕೆ ಒಂದು ಹೊತ್ತಿನ ಊಟಕ್ಕೂ ದಿಕ್ಕಿಲ್ಲದಾಗಿದೆ. ನ್ಯಾಯಬೆಲೆ ಅಂಗಡಿಯಿಂದ ಎರಡು ತಿಂಗಳಿಗೆ 20 ಕೆಜಿ ಅಕ್ಕಿ ನೀಡಿದ್ದಾರೆ. ಇದನ್ನು ಬಿಟ್ಟರೆ ಯಾವ ಕನಿಷ್ಠ ಸೌಲಭ್ಯವೂ ಇಲ್ಲದೇ ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.

ABOUT THE AUTHOR

...view details