ಕರ್ನಾಟಕ

karnataka

ETV Bharat / state

ಕೊಡಗಿನಲ್ಲಿ ಆರದ ಮೊಟ್ಟೆ ಕಾವು..ಮಡಿಕೇರಿಯಲ್ಲಿ ಪೊಲೀಸರಿಂದ ಪಥಸಂಚಲನ - ಮಡಿಕೇರಿಯ ಪ್ರಮುಖ ನಗರಗಳಲ್ಲಿ ಪೊಲೀಸರು ಪಥ ಸಂಚಲನ‌

ಕೊಡಗಿನಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸದಂತೆ, ಬಿಗಿ ಪೊಲೀಸ್​ ಬಂದೋಬಸ್ಥ್​ ಕೈಗೊಳ್ಳಲಾಗಿದೆ. ಇಂದು ಎಡಿಜಿಪಿ ಅಲೋಕ್ ಕುಮಾರ್​ ನೇತೃತ್ವದಲ್ಲಿ ಮಡಿಕೇರಿಯ ಪ್ರಮುಖ ಬೀದಿಗಳಲ್ಲಿ ಪೊಲೀಸರು ಪಥ ಸಂಚಲನ‌ ಮಾಡಿ ಸಾರ್ವಜನಿಕರಿಗೆ ಧೈರ್ಯ ತುಂಬಿದರು.

police force parade in madikeri
ಮಡಿಕೇರಿಯಲ್ಲಿ ಪೊಲೀಸರಿಂದ ಪಥಸಂಚಲನ

By

Published : Aug 26, 2022, 9:44 AM IST

Updated : Aug 26, 2022, 11:41 AM IST

ಕೊಡಗು: ಜಿಲ್ಲೆಯಲ್ಲಿ ಮೊಟ್ಟೆ ಕಾವು ಇನ್ನೂ ಆರಿಲ್ಲ. ಎರಡು ಪಕ್ಷಗಳ ಒಳಜಗಳಕ್ಕೆ ಕೊಡಗಿನಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಿದ್ದು, ಎಡಿಜಿಪಿ ಅಲೋಕ್ ಕುಮಾರ್​ ನೇತೃತ್ವದಲ್ಲಿ ಮಡಿಕೇರಿಯ ಪ್ರಮುಖ ಬೀದಿಗಳಲ್ಲಿ ಪೊಲೀಸರು ಪಥ ಸಂಚಲನ‌ ಮಾಡಿ ಜನರಿಗೆ ಧೈರ್ಯ ತುಂಬಿದರು.

ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತದ ಬಳಿಕ ಕಾಂಗ್ರೆಸ್​ ಮತ್ತು ಬಿಜೆಪಿ ಪಕ್ಷಗಳು ಒಳಗೊಳಗೆ ಕೆಂಡ ಕಾರುತ್ತಿವೆ. ಜಿಲ್ಲೆಯ ಜನರ ಹಿತದೃಷ್ಟಿಯಿಂದ ಎರಡು ಪಕ್ಷಗಳ ಗಲಾಟೆಗೆ ಬ್ರೇಕ್ ಹಾಕಿರುವ ಜಿಲ್ಲಾಡಳಿತ ಸೆಕ್ಷನ್ 144 ಜಾರಿ ಮಾಡಿದೆ. ಸಭೆ, ಸಮಾರಂಭ, ಪ್ರತಿಭಟನೆ ನಡೆಯದಂತೆ ಮೂರು ದಿನಗಳ ಕಾಲ ನಿರ್ಬಂಧ ಹೇರಲಾಗಿದೆ.

ಮಡಿಕೇರಿಯಲ್ಲಿ ಪೊಲೀಸರಿಂದ ಪಥಸಂಚಲನ

ಇದನ್ನೂ ಓದಿ:ಕೊಡಗು ನಿಷೇಧಾಜ್ಞೆ ಹಿನ್ನೆಲೆ ಎಸ್ಪಿ ಕಚೇರಿಯಲ್ಲಿ ಐಜಿಪಿ ಸಭೆ

ಎಡಿಜಿಪಿ ಅಲೋಕ್ ಕುಮಾರ್​ ನೇತೃತ್ವದಲ್ಲಿ ಮಡಿಕೇರಿಯ ಪ್ರಮುಖ ನಗರಗಳಲ್ಲಿ ಪೊಲೀಸರು ಪಥ ಸಂಚಲನ‌ ನಡೆಸಿದರು. ಕುಶಾಲನಗರ, ವಿರಾಜಪೇಟೆ, ಸೋಮವಾರ ಪೇಟೆ, ಪೋನ್ನಪೇಟೆ ಭಾಗದಲ್ಲಿ ಕೂಡ ಪಥಸಂಚಲನ ಮಾಡಿ ನಿಮ್ಮ ಜೊತೆ ನಾವಿದ್ದೇವೆ. ಭಯ ಪಡುವ ಅಗತ್ಯ ಇಲ್ಲ ಎಂದು ಸಾರ್ವಜನಿಕರಿಗೆ ಧೈರ್ಯ ತುಂಬಿದರು.

ಇದನ್ನೂ ಓದಿ:ಕೊಡಗಿನ ಕಾಳಗಕ್ಕೆ ನಿಷೇಧಾಜ್ಞೆ ಬ್ರೇಕ್​: ಆ.26ರ ಕಾಂಗ್ರೆಸ್​ ಪ್ರತಿಭಟನೆ, ಬಿಜೆಪಿ ಸಮಾವೇಶ​ ಮುಂದಕ್ಕೆ

ಜಿಲ್ಲೆಯಲ್ಲಿ ಒಟ್ಟು 20 ಚೆಕ್​ಪೋಸ್ಟ್​ಗಳಲ್ಲಿ ತಪಾಸಣೆ ಮಾಡಲಾಗುತ್ತಿದೆ. ಮಡಿಕೇರಿಯಲ್ಲೇ 16 ಚೆಕ್ ಪೋಸ್ಟ್ ನಿರ್ಮಿಸಲಾಗಿದೆ. ಕಿಡಿಗೇಡಿಗಳಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಈಗಾಗಲೇ ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

Last Updated : Aug 26, 2022, 11:41 AM IST

ABOUT THE AUTHOR

...view details