ಕರ್ನಾಟಕ

karnataka

ETV Bharat / state

ಮಡಿಕೇರಿ ದಸರಾ ಜನೋತ್ಸವಕ್ಕೆ ಸಕಲ ಸಿದ್ಧತೆಯಲ್ಲಿ ತೊಡಗಿದ ಪೊಲೀಸ್ ಇಲಾಖೆ.. - Police Department

ಐತಿಹಾಸಿಕ ಮಡಿಕೇರಿ ಹಾಗೂ ಗೋಣಿಕೊಪ್ಪ ದಸರಾ ಜನೋತ್ಸವದ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಅಗತ್ಯ ಬಂದೋಬಸ್ತ್ ಕೈಗೊಂಡಿದೆ ಎಂದು ಕೊಡಗು ಎಸ್​ಪಿ ಸುಮನ್.ಡಿ ಪನ್ನೇಕರ್ ಹೇಳಿದ್ದಾರೆ.

ಸುಮನ್.ಡಿ ಪನ್ನೇಕರ್

By

Published : Oct 5, 2019, 11:16 PM IST

ಕೊಡಗು: ಐತಿಹಾಸಿಕ ಮಡಿಕೇರಿ ಹಾಗೂ ಗೋಣಿಕೊಪ್ಪ ದಸರಾ ಜನೋತ್ಸವದ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಅಗತ್ಯ ಬಂದೋಬಸ್ತ್ ಕೈಗೊಂಡಿದೆ ಎಂದು ಕೊಡಗು ಎಸ್​ಪಿ ಸುಮನ್.ಡಿ ಪನ್ನೇಕರ್ ಹೇಳಿದರು.‌

ಮಡಿಕೇರಿ ದಸರಾ ಜನೋತ್ಸವಕ್ಕೆ ಸಕಲ ಸಿದ್ಧತೆ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವಮಿ ಹಾಗೂ ದಶಮಿ ದಿನ ಬಂದೋಬಸ್ತ್‌ಗೆ ಪೊಲೀಸ್ ಇಲಾಖೆ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಜಿಲ್ಲೆ ಹಾಗೂ ಹೊರ‌ ಜಿಲ್ಲೆಗಳಿಂದ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. 4 ಜನ ಡಿವೈ‌ಎಸ್​ಪಿ,15 ಜನ ಇನ್ಸ್​ಪೆಕ್ಟರ್‌ಗಳು, 24 ಪಿಎಸ್‌ಐ, 700 ಸಿಬ್ಬಂದಿ, 300 ಗೃಹ ರಕ್ಷಕ ದಳದ ಸಿಬ್ಬಂದಿ, 100 ಮಹಿಳಾ ಪೊಲೀಸರು, 5 ಕೆ‌ಎಸ್‌ಆರ್‌ಪಿ, ಹಾಗೂ16 ಡಿಎಆರ್ ಮತ್ತು 2 ವಿಧ್ವಂಸಕ ಕೃತ್ಯ ತಡೆ ತಂಡಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.

ಮಡಿಕೇರಿಗೆ 60‌ ರಿಂದ 80 ಸಾವಿರ ಹಾಗೂ ಗೋಣಿಕೊಪ್ಪಕ್ಕೆ 15 ಸಾವಿರ ಜನರು ಬರುವ ನಿರೀಕ್ಷೆಯಿದೆ. ಅಕ್ಟೋಬರ್ 8 ರ ಮಧ್ಯಾಹ್ನದಿಂದ 9 ರ ಮಧ್ಯಾಹ್ನದವರೆಗೆ ಜಿಲ್ಲೆಗೆ ಅಧಿಕ ಸಂಖ್ಯೆಯಲ್ಲಿ ಜನತೆ ಭೇಟಿ ನೀಡುವರು. ಅಕ್ಟೋಬರ್ 7 ರಿಂದ 9 ರವರೆಗೆ ಮಡಿಕೇರಿ, 8 ರಂದು ಗೋಣಿಕೊಪ್ಪದಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಮಡಿಕೇರಿಯಲ್ಲಿ 40 ಮತ್ತು ಗೋಣಿಕೊಪ್ಪದಲ್ಲಿ 15 ಸ್ಥಳಗಳಲ್ಲಿ ‌ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದರು.

ಇನ್ನು ಅಕ್ಟೋಬರ್ 8 ರ ಮಧ್ಯಾಹ್ನದಿಂದ 9 ರ ಮಧ್ಯಾಹ್ನದವರೆಗೆ ನಗರದೊಳಗೆ ವಾಹನ ಸಂಚಾರ ನಿಷೇಧಿಸಲಾಗಿದೆ. ವಾಹನಗಳಿಗೆ ಪಟ್ಟಣದ ಮ್ಯಾನ್ಸ್ ಕಾಂಪೌಂಡ್, ಆರ್‌ಎಂಸಿ, ಶಾಂತಿ‌ಚರ್ಚ್, ಸಂತ ಜೋಸೆಫರ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಮೈಸೂರು - ಮಂಗಳೂರು ವಾಹನಗಳಿಗೆ ಪರ್ಯಾಯ ಮಾರ್ಗ ಸೂಚಿಸಿದ್ದೇವೆ ಎಂದು ತಿಳಿಸಿದರು.

ABOUT THE AUTHOR

...view details