ಕರ್ನಾಟಕ

karnataka

ETV Bharat / state

ಗಾಂಜಾ ಮಾರಾಟ: 6 ಜನರ ಬಂಧನ - ಗಾಂಜಾ ಮಾರಾಟಗಾರರ ಬಂಧನ

ಇಲ್ಲಿನ ಚೆಟ್ಟಳ್ಳಿಯ ಫ್ರೌಢ ಶಾಲಾ ಮೈದಾನದ ಸಮೀಪ ರಸ್ತೆ ಬದಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 5 ಕೆಜಿ ಗಾಂಜಾ ಸೇರಿ 8.50 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

police arrested 6  people for selling marijuana Near school at Madikeri
ಗಾಂಜಾ ಮಾರಾಟ ಮಾಡುತ್ತಿದ್ದ 6 ಜನ ಆರೋಪಿಗಳನ್ನು ಬಂಧಿಸಿದ ಪೊಲೀಸರು..!

By

Published : Jun 18, 2020, 9:41 PM IST

ಮಡಿಕೇರಿ(ಕೊಡಗು): ಶಾಲಾ ಮೈದಾನದ ಸಮೀಪ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ‌ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪನ್ನೇಕರ್ ತಿಳಿಸಿದರು.‌

ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಚೆಟ್ಟಳ್ಳಿಯ ಫ್ರೌಢ ಶಾಲಾ ಮೈದಾನದ ಸಮೀಪ ರಸ್ತೆ ಬದಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದರು. ಬಂಧಿತರಿಂದ 5 ಕೆಜಿ ಗಾಂಜಾ, ನಗದು ಮತ್ತು ಕೃತ್ಯಕ್ಕೆ ಉಪಯೋಗಿಸಿದ ಕಾರು, ಆಟೋ ರಿಕ್ಷಾ ಮತ್ತು ಒಂದು ಬೈಕ್ ಸೇರಿದಂತೆ ಒಟ್ಟು 8.50 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೈಸೂರಿ‌ನ ಹೆಬ್ಬಾಳ ನಿವಾಸಿ ಆನಂದ, ವಿರಾಜಪೇಟೆ ತಾಲೂಕಿನ ಮೊಗರಗಲ್ಲಿ ನಿವಾಸಿ ಖಲೀಲ್, ಸೋಮವಾರಪೇಟೆ ತಾಲೂಕಿನ ವಾಲ್ನೂರು ತ್ಯಾಗತ್ತೂರು ನಿವಾಸಿ ಕೆ.ಎಸ್.ಫರೀದ್, ಅಭ್ಯತ್ಮಂಗಲ ನಿವಾಸಿಗಳಾದ ಹೆಚ್.ಎನ್.ನಿಖಿಲ್ ಮತ್ತು ಹೆಚ್.ಎಸ್.ಹರೀಶ್ ಹಾಗೂ ಚೇರಳ ಶ್ರೀಮಂಗಲದ ನಿವಾಸಿ ಕೆ.ಎನ್.ಅರುಣ್ ಕುಮಾರ್ ಎಂಬ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.

ABOUT THE AUTHOR

...view details