ಕೊಡಗು:ಶಾಲಾ ಮಕ್ಕಳಿಗೆ ವಿತರಣೆ ಮಾಡಿದ ಅಕ್ಕಿಯಲ್ಲಿ ಪ್ಲಾಸ್ಟಿಕ್ ಮಾದರಿಯ ಅಕ್ಕಿ ಪತ್ತೆಯಾಗಿರುವುದು ಪೋಷಕರನ್ನ ಆತಂಕಕ್ಕೆ ದೂಡಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ. ಮಡಿಕೇರಿ ಸರ್ಕಾರಿ ಪ್ರೌಢಶಾಲಾ ಮಕ್ಕಳಿಗೆ ವಿತರಣೆ ಮಾಡಿದ ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ಮಾದರಿಯ ಅಕ್ಕಿ ಪತ್ತೆಯಾಗಿದೆ. ಮೂಟೆಯಲ್ಲಿ ಅನುಮಾನಸ್ಪದವಾಗಿ ಕಂಡು ಬಂದ ಅಕ್ಕಿಯನ್ನು, ಪ್ಲಾಸ್ಟಿಕ್ ಅಕ್ಕಿ ಅಂತಾ ಆತಂಕಗೊಂಡ ಪೋಷಕರು ಶಾಲೆಯಲ್ಲಿನ ಅಕ್ಕಿ ಮೂಟೆಯನ್ನ ಪರಿಶೀಲನೆ ಮಾಡಿ ನೋಡಿದಾರೆ. ಈ ಅಕ್ಕಿ ಸಾಮಾನ್ಯ ಅಕ್ಕಿಯಂತೆ ಇಲ್ಲ. ಬದಲಾಗಿ ಪ್ಲಾಸ್ಟಿಕ್ ಮಾದರಿಯಂತೆ ಇದೆ ಎಂದು ಪೋಷಕರ ಆರೋಪಿಸಿದ್ದಾರೆ.
ಮಕ್ಕಳ ಅಕ್ಷರಶಃ ದಾಸೋಹದ ಬಿಸಿಯೂಕ್ಕೆ ಸರಬರಾಜು ಆಗುವ ಅಕ್ಕಿಯಲ್ಲಿ ಪ್ಲಾಸ್ಟಿಕ್ ಮಣಿಯಂತ ವಸ್ತುಗಳು ಪತ್ತೆಯಾಗಿರೋದು ಜಿಲ್ಲೆಯಲ್ಲಿ ಆತಂಕ ಸೃಷ್ಟಿಮಾಡಿದೆ. ನಿನ್ನೆ ದಿನ ಶಾಲಾ ಮಕ್ಕಳಿಗೆ ಬಿಸಿಯೂಟ ತಯಾರಿಮಾಡಲು ಮುಂದಾದ ಅಡುಗೆ ಸಿಬ್ಬಂದಿ ಅಕ್ಕಿಯನ್ನ ತೊಳೆಯುವ ಸಂದರ್ಭದಲ್ಲಿ ಪ್ಲಾಸ್ಟಿಕ್ ನಂತ ಮಣಿಗಳು ನೀರಿನಲ್ಲಿ ತೇಲುತ್ತಿರುವುದು ಪತ್ತೆಯಾಗಿದೆ. ತಕ್ಷಣವೇ ಎಚ್ಚೆತ್ತ ಅಡುಗೆ ಸಿಬ್ಬಂದಿ ಶಾಲೆಯ ಪ್ರಮುಖರ ಗಮನಕ್ಕೆ ತಂದಿದ್ದಾರೆ.
ಬಿಸಿಯೂಟಕ್ಕೆ ಸರಬರಾಜು ಆದ ಅಕ್ಕಿಯನ್ನ ಶಿಕ್ಷಕರು ಪರಿಶೀಲಿಸಿದ್ದಾಗ ಶಾಲೆಗೆ ರವಾನೆಯಾದ ಒಂದು ಮೂಟೆಯಲ್ಲಿ ಈ ರೀತಿಯ ಒಂದು ಮಣಿಗಳು ಪತ್ತೆಯಾಗಿದೆ. ಒಂದು ವೇಳೆ ಅಡುಗೆ ಸಿಬ್ಬಂದಿಗಳು ಸರಿಯಾಗಿ ಗಮನಿಸದೆ ಅಡುಗೆ ಮಾಡಿದಲ್ಲಿ ದೊಡ್ಡದೊಂದು ಅನಾಹುತ ನಡೆದೆ ಹೋಗುತ್ತಿತ್ತು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಮಡಿಕೇರಿ ಸರ್ಕಾರಿ ಫ್ರೌಡಶಾಲೆಯಲ್ಲಿ 200 ಕ್ಕೂ ಹೆಚ್ಚು ಮಕ್ಕಳಿದ್ದು, ಎಲ್ಲ ಮಕ್ಕಳೂ ಕೂಡ ಬಡವರ್ಗದ ಮಕ್ಕಳಾಗಿದ್ದಾರೆ. ಈ ಬಡ ಮಕ್ಕಳ ಬಿಸಿಯೂಟದ ಅಕ್ಕಿಯನ್ನೂ ಕೂಡ ಕಲಬೇರಕೆ ಮಾಡಿ ಸರಬರಾಜು ಮಾಡುತ್ತಿರೋದು ವಿಪರ್ಯಾಸವೇ ಸರಿ.