ಕೊಡಗು: ಜಿಲ್ಲೆಯ ಜೀವನದಿ ಕಾವೇರಿ ಇಂದು ಮಧ್ಯರಾತ್ರಿ ತೀರ್ಥರೂಪಿಣಿಯಾಗಿ ದರ್ಶನ ಕೊಡಲಿರುವ ಹಿನ್ನೆಲೆಯಲ್ಲಿ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಸಂಪ್ರದಾಯ ಬದ್ಧವಾಗಿ ಪಿಂಡ ಪ್ರದಾನ ಕಾರ್ಯವನ್ನು ನೆರವೇರಿಸಲಾಗುತ್ತಿದೆ.
ಕಾವೇರಿ ತೀರ್ಥೋದ್ಭವಕ್ಕೂ ಮೊದಲು ಭಾಗಮಂಡಲದಲ್ಲಿ ಪಿಂಡ ಪ್ರದಾನ - kaveri river
ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಕಾವೇರಿ, ಕನ್ನಿಕೆ ಹಾಗೂ ಸುಜೋತಿ ನದಿಗಳ ಸಂಗಮ ಸ್ಥಳದಲ್ಲಿ ಪಿಂಡ ಪ್ರದಾನ ಶಾಸ್ತ್ರೋಕ್ತವಾಗಿ ನೆರವೇರುತ್ತಿದೆ.
ಕಾವೇರಿ ತೀರ್ಥೋದ್ಭವಕ್ಕೂ ಮೊದಲು ಭಾಗಮಂಡಲದಲ್ಲಿ ಪಿಂಡ ಪ್ರಧಾನ
ಜಿಲ್ಲೆಯ ತಲಕಾವೇರಿಯಲ್ಲಿ 12 ಗಂಟೆ 59. ನಿಮಿಷಕ್ಕೆ ಬ್ರಹ್ಮ ಕುಂಡಿಕೆಯಲ್ಲಿ ಆವಿರ್ಭವಿಸುವ ಕಾವೇರಿಯನ್ನು ಕಣ್ತುಂಬಿಕೊಳ್ಳಲು ಸಹಸ್ರ ಸಂಖ್ಯೆಯಲ್ಲಿ ಭಕ್ತರು ರಾಜ್ಯ ಹಾಗೂ ದೇಶದ ಹಲವು ಭಾಗಗಳಿಂದ ಆಗಮಿಸುತ್ತಿದ್ದಾರೆ.
ಪಿಂಡ ಪ್ರದಾನ ಮಾಡಿ ಸಂಗಮದಲ್ಲಿ ಮಿಂದು ತಲಕಾವೇರಿಯತ್ತ ಭಕ್ತರ ದಂಡೇ ಸೇರುತ್ತಿದೆ. ಪಿಂಡ ಪ್ರದಾನ ಕಾರ್ಯದಿಂದ ಹಿರಿಯರಿಗೆ ಸದ್ಗತಿ ಮತ್ತು ಪಾಪ ಕರ್ಮಗಳು ಪರಿಹಾರವಾಗುತ್ತವೆ ಎನ್ನುವ ನಂಬಿಕೆ ಇದೆ.