ಮಡಿಕೇರಿ (ಕೊಡಗು):ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಲಾಕ್‌ಡೌನ್ ಜಾರಿಯಲ್ಲಿದ್ದರೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಜನತೆ ಆರ್‌ಟಿಒ ಕಚೇರಿಯಲ್ಲಿ ಕಿಕ್ಕಿರಿದು ಸೇರಿದ್ದ ಘಟನೆ ನಡೆದಿದೆ. ಒಂದು ಪಾಸಿಟಿವ್ ಪ್ರಕರಣದಿಂದ ಮುಕ್ತವಾದ ಬಳಿಕ ಕೊಡಗು ಹಸಿರು ವಲಯದ ವ್ಯಾಪ್ತಿಗೆ ಸೇರಿತ್ತು.
ಸಾಮಾಜಿಕ ಅಂತರ ಮರೆತ ಜನತೆ: ಮಡಿಕೇರಿ ಆರ್‌ಟಿಒ ಕಚೇರಿಯಲ್ಲಿ ಜನದಟ್ಟಣೆ - ಚಾಲನಾ ಪರವಾನಗಿ
ಲಾಕ್‌ಡೌನ್ ಸಡಿಲಿಕೆ ಬಳಿಕ ರಾಜ್ಯದ ಹಲವು ಜಿಲ್ಲೆಗಳಲ್ಲಿ ಜನಸಂದಣಿ ಹೆಚ್ಚಾಗುತ್ತಿರುವ ಘಟನೆಗಳು ವರದಿಯಾಗುತ್ತಿವೆ. ಇಂತಹ ಘಟನೆ ಈಗ ಮಡಿಕೇರಿಯ ಆರ್‌ಟಿಒ ಕಚೇರಿಯಲ್ಲಿಯೂ ನಡೆದಿದೆ.
ಸಾಮಾಜಿಕ ಅಂತಕ ಮರೆತ ಜನತೆ: ಮಡಿಕೇರಿ ಆರ್‌ಟಿಓ ಕಚೇರಿಯಲ್ಲಿ ಜನದಟ್ಟಣೆ..!
ಮುಂಜಾಗ್ರತಾ ದೃಷ್ಟಿಯಿಂದ ಜಿಲ್ಲಾಡಳಿತ ಕಡ್ಡಾಯವಾಗಿ ಮಾಸ್ಕ್ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಸೂಚಿಸಿದ್ದರೂ ಜನತೆ ಮಾತ್ರ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ.
ವಾಹನ ಪರವಾನಗಿ ನವೀಕರಣ ಹಾಗೂ ಚಾಲನಾ ತರಬೇತಿಗೆ ನಗರದ ಆರ್‌ಟಿಒ ಕಚೇರಿಗೆ ದೌಡಾಯಿಸಿದ್ದಾರೆ. ಪರಿಣಾಮ ಕಚೇರಿಯಲ್ಲಿ ಜನದಟ್ಟಣೆ ಉಂಟಾಗಿದ್ದು ಕಂಡು ಬಂದಿದೆ.