ಮಡಿಕೇರಿ (ಕೊಡಗು): ಕೊಡಗಿಗೂ ಮಳೆಗೂ ಒಂದಿಲ್ಲೊಂದು ನಂಟು ಇದ್ದೇ ಇದೆ. ಜಿಲ್ಲೆಯಲ್ಲಿ ಮಳೆ ಸೃಷ್ಟಿಸಿರುವ ಅವಾಂತರ ಅಷ್ಟಿಷ್ಟಲ್ಲ.
2018-19ರಲ್ಲಿ ಸುರಿದ ಮಹಾಮಳೆ ಪ್ರವಾಹವನ್ನೇ ಸೃಷ್ಟಿಸಿತ್ತು. ಪ್ರತಿವರ್ಷ ಜಿಲ್ಲಾಡಳಿತ ಸುರಕ್ಷಿತ ಸ್ಥಳಗಳಿಗೆ ಹೋಗುವಂತೆ ಜನರಿಗೆ ನೋಟಿಸ್ ಕೊಡುತ್ತದೆ.

ಎತ್ತರ ಹಾಗೂ ಇಳಿಜಾರು ಪ್ರದೇಶಗಳಲ್ಲಿ ವಾಸಿಸುತ್ತಿರುವ ಚಾಮುಂಡೇಶ್ವರಿ ನಗರ ಹಾಗೂ ಇಂದಿರಾ ನಗರಗಳ ನಿವಾಸಿಗಳಿಗೆ ಪ್ರತಿವರ್ಷ ಜಿಲ್ಲಾಡಳಿತ ಸುರಕ್ಷಿತ ಪ್ರದೇಶಗಳಿಗೆ ಹೋಗುವಂತೆ ತಿಳಿಸಿದ್ದರೂ ಹಲವರು ಆದೇಶ ಪಾಲಿಸುವುದಿಲ್ಲ. ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ನಡೆದ ಘಟನೆಗಳು ಕಣ್ಮುಂದೆ ಇರುವುದರಿಂದ ಈ ವರ್ಷದ ಮಳೆಗಾಲ ಸ್ಥಳೀಯರಲ್ಲಿ ಆತಂಕವನ್ನು ಸೃಷ್ಟಿಸಿದೆ.
ಇದೆಲ್ಲವನ್ನೂ ಮನಗಂಡ ಬಡಾವಣೆಯ ಹಲವು ನಿವಾಸಿಗಳು ಮಳೆಗಾಲದ ಅಂತ್ಯದವರೆಗೆ ತಾತ್ಕಾಲಿಕವಾಗಿ ಮನೆ ಖಾಲಿ ಮಾಡುತ್ತಿದ್ದಾರೆ. 2018ರಲ್ಲಿ ಸುರಿದ ಮಹಾಮಳೆಯಿಂದ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸಬೇಕಾಯಿತು. ತೋಡು ನೀರು ಹೆಚ್ಚಾದ ಪರಿಣಾಮ ತೊಂದರೆ ಅನುಭವಿಸಿದ್ದೇವೆ. ಶೀತದ ಪ್ರಮಾಣ ಹೆಚ್ಚಿರುವುದರಿಂದ ಮನೆಗಳಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ನಮಗೆ ನೋಟಿಸ್ ಕೊಡದಿದ್ದರೂ ಸ್ವಯಂ ಪ್ರೇರಿತವಾಗಿ ಬೇರೆಡೆ ಹೋಗುತ್ತಿದ್ದೇವೆ ಎಂದಿದ್ದಾರೆ.
ಮನೆಯಲ್ಲಿ ಚಿಕ್ಕ ಮಕ್ಕಳು ಹಾಗೂ ವಯಸ್ಸಾದವರು ಇದ್ದಾರೆ. ಮನೆಯ ಸುತ್ತಲೂ ಬರೆ ಇರುವುದರಿಂದ ಈ ಮಳೆಗೆ ಯಾವಾಗ ಬೇಕಾದರೂ ಅನಾಹುತಗಳು ಸಂಭವಿಸುವ ಲಕ್ಷಗಳು ಇರುವುದರಿಂದ ನಾವೇ ಖಾಲಿ ಮಾಡುತ್ತಿದ್ದೇವೆ ಎಂದು ಅಳಲು ತೋಡಿಕೊಂಡಿದ್ದಾರೆ.