ಕೊಡಗು: ಜಿಲ್ಲೆಯಲ್ಲಿ ಸುರಿದ ಭಾರಿ ಮಳೆ ಅವಾಂತರ ಸೃಷ್ಟಿಸಿದೆ. ವರುಣನ ಆರ್ಭಟಕ್ಕೆ ಶಾಲೆ, ಮನೆಗಳ ಗೋಡೆಗಳು ಸೇರಿದಂತೆ ಬೆಟ್ಟ ಗುಡ್ಡ ಕುಸಿಯುತ್ತಿದ್ದು ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ. ಇನ್ನೊಂದೆಡೆ, ಹಾರಂಗಿ ಡ್ಯಾಂಗೆ ಒಳ ಹರಿವು 15 ಸಾವಿರ ಕ್ಯೂಸೆಕ್ ಹೆಚ್ಚಾಗಿದೆ.
ಜಿಲ್ಲೆಯ ನದಿ, ತೊರೆ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದೆ. ಹಾರಂಗಿ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿದೆ. ನದಿ ಪಾತ್ರದ ಜನತೆ ಪ್ರವಾಹದ ಭೀತಿಯಿಂದ ಊರು ಖಾಲಿ ಮಾಡುತ್ತಿದ್ದಾರೆ. ಕುಶಾಲನಗರದ ಕುವೆಂಪು ಹಾಗೂ ಸಾಯಿಶಂಕರ ಬಡಾವಣೆಗಳಿಗೆ ನೀರು ನುಗ್ಗುವ ಚಿಂತೆಯಿಂದ ಕೆಲವರು ಸುರಕ್ಷಿತ ಪ್ರದೇಶಗಳತ್ತ ತೆರಳುತ್ತಿದ್ದಾರೆ.