ಮಡಿಕೇರಿ : ಟಿಪ್ಪು ಸುಲ್ತಾನ್ ವಿಚಾರದ ಬಳಿಕ ಶಾಂತವಾಗಿದ್ದ ಕೊಡಗು ಜಿಲ್ಲೆಯಲ್ಲಿ ಇದೀಗ ಮತ್ತೆ ವ್ಯಾಪಾರ ವಿಚಾರದಲ್ಲಿ ಸಂಘರ್ಷ ಆರಂಭವಾಗಿದೆ. ಅನ್ಯಧರ್ಮದ ವರ್ತಕರಿಗೆ ದೇವಾಲಯದ ಜಾತ್ರೆಗಳಲ್ಲಿ ವ್ಯಾಪಾರಕ್ಕೆ ಅವಕಾಶ ನೀಡದಂತೆ ಹಿಂದೂಪರ ಸಂಘಟನೆಗಳು ಕರೆ ನೀಡಿವೆ.
ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಹರಿಹರ ಸುಬ್ರಹ್ಮಣ್ಯ ದೇವಾಲಯದಲ್ಲಿ ಅನ್ಯ ಧರ್ಮದ ವ್ಯಾಪಾರಸ್ಥರಿಗೆ ಹಿಂದೂಪರ ಸಂಘಟನೆಗಳು ನಿರ್ಬಂಧ ಹೇರಿವೆ. ದೇವಾಲಯದಲ್ಲಿ ಸುಬ್ರಮಣ್ಯ ಷಷ್ಠಿ ಹಾಗೂ ವಾರ್ಷಿಕೋತ್ಸವ ಇದೇ ತಿಂಗಳ ನ.29 ಹಾಗೂ 30ರಂದು ನಡೆಯಲಿದೆ. ಹೀಗಾಗಿ ಹಿಂದೂ ಸಂಘಟನೆಯವರು ಅನ್ಯಧರ್ಮದ ವ್ಯಾಪಾರಸ್ಥರಿಗೆ ವ್ಯಾಪಾರ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.