ಕೊಡಗು:ಭೂ ಕುಸಿತದಿಂದ ಕಣ್ಮರೆಯಾಗಿದ್ದವರ ಪೈಕಿ ಮಹಿಳೆ ಮೃತದೇಹವೊಂದು ನಾಲ್ಕು ದಿನಗಳ ಬಳಿಕ ಪತ್ತೆಯಾಗಿದೆ.
ಭಾರೀ ಮಳೆ: ನಾಲ್ಕು ದಿನಗಳ ಬಳಿಕ ಮಹಿಳೆಯ ಮೃತದೇಹ ಪತ್ತೆ - ಕೊಡಗು ಪ್ರವಾಹ ಸುದ್ದಿ
ವಿರಾಜಪೇಟೆಯಲ್ಲಿ ಗುಡ್ಡ ಕುಸಿತ ಸಂಭವಿಸಿದ್ದ ಸ್ಥಳದಲ್ಲಿ ಮತ್ತೊಬ್ಬ ಮಹಿಳೆಯ ಮೃತದೇಹ ಪತ್ತೆಯಾಗಿದೆ.
ಮಹಿಳೆಯ ಮೃತದೇಹ ಪತ್ತೆ
ವಿರಾಜಪೇಟೆ ತಾಲೂಕಿನ ತೋರಾ ಗ್ರಾಮದಲ್ಲಿ ಮಹಾ ಮಳೆಗೆ ಉಂಟಾಗಿದ್ದ ಭೂ ಕುಸಿತಕ್ಕೆ ಗ್ರಾಮದ 12 ಮಂದಿ ನೆಲ ಸಮಾಧಿ ಆಗಿರುವ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ನಾಲ್ಕು ದಿನಗಳಿಂದ ಘಟನಾ ಸ್ಥಳದಲ್ಲಿ ಜೆಸಿಬಿ ಮೂಲಕ ಶೋಧ ಕಾರ್ಯ ನಡೆಸಲಾಗುತ್ತಿತ್ತು.
ತೀವ್ರ ಹುಡುಕಾಟದ ಬಳಿಕ ಪ್ರಭು ಎಂಬುವರ ಪತ್ನಿ ಅನಸೂಯ ಎಂಬ ಮಹಿಳೆಯ ಮೃತ ದೇಹ ಪತ್ತೆಯಾಗಿದೆ. ಮತ್ತಷ್ಟು ಮೃತದೇಹಗಳಿಗಾಗಿ ಎನ್‌ಡಿಆರ್‌ಎಫ್, ಮಿಲಿಟರಿ ಹಾಗೂ ಸ್ಥಳೀಯರು ತೀವ್ರ ಹುಡುಕಾಟ ನಡೆಸುತಿದ್ದಾರೆ.