ಕೊಡಗು: ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ ಸೋಂಕಿಗೆ ವ್ಯಕ್ತಿಯೋರ್ವ ಬಲಿಯಾಗಿದ್ದು ಮೃತರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.
ಕೊರೊನಾಗೆ ವ್ಯಕ್ತಿ ಬಲಿ....ಕೊಡಗಿನಲ್ಲಿ 12ಕ್ಕೇರಿತು ಮೃತರ ಸಂಖ್ಯೆ..! - Kodagu corona case
ಮಡಿಕೇರಿ ಪಟ್ಟಣದ ಭಗವತಿ ನಗರದ 58 ವರ್ಷದ ವ್ಯಕ್ತಿ ಮಹಾಮಾರಿ ಕೊರೊನಾಗೆ ಕೊನೆಯುಸಿರೆಳೆದಿದ್ದಾರೆ.
DC Anis K joy
ಮಡಿಕೇರಿ ಪಟ್ಟಣದ ಭಗವತಿ ನಗರದ 58 ವರ್ಷದ ವ್ಯಕ್ತಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಇವರು ಸಕ್ಕರೆ ಖಾಯಿಲೆ ಹಾಗು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು. ತಲೆನೋವು ಮತ್ತು ಜ್ವರ ಕಾಣಿಸಿಕೊಂಡಿದ್ದರಿಂದ ಆಗಸ್ಟ್ 12 ರಂದು ಅವರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ.