ಕೊಡಗು: ಹಳೇ ದ್ವೇಷದ ಹಿನ್ನೆಲೆ ರವೀಂದ್ರ ಎಂಬುವರ ಮನೆಯ ಕಿಟಕಿ ಗಾಜುಗಳನ್ನು ಪುಡಿ ಮಾಡಿ ದುಷ್ಕರ್ಮಿಗಳು ಕಾಲ್ಕಿತ್ತಿರುವ ಘಟನೆ ಪಟ್ಟಣದ ಪುಟಾಣಿ ನಗರದಲ್ಲಿ ರಾತ್ರಿ ನಡೆದಿದೆ.
ಹಳೇ ದ್ವೇಷ: ಮನೆ ಮೇಲೆ ಕಲ್ಲು ತೂರಿ ಕಾಲ್ಕಿತ್ತ ಸ್ನೇಹಿತರು! - Kodagu stone throen on house
ಹಳೇ ದ್ವೇಷದ ಹಿನ್ನೆಲೆ ರವೀಂದ್ರ ಎಂಬುವರ ಮನೆಯ ಕಿಟಕಿ ಗಾಜುಗಳನ್ನು ಪುಡಿ ಮಾಡಿ ದುಷ್ಕರ್ಮಿಗಳು ಕಾಲ್ಕಿತ್ತಿರುವ ಘಟನೆ ಪಟ್ಟಣದ ಪುಟಾಣಿ ನಗರದಲ್ಲಿ ರಾತ್ರಿ ನಡೆದಿದೆ.

ಇನ್ನೂನ್ನು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಈ ಕೃತ್ಯ ಎಸಗಿರುವ ರವೀಂದ್ರರ ಮಗ ಕೀರ್ತನ್ ಸ್ನೇಹಿತರಾದ ಯಶವಂತ್ ಎಂಬುವರನ್ನು ಮಡಿಕೇರಿ ನಗರ ಪೋಲಿಸ್ ಠಾಣೆಯ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.
ರಾತ್ರಿ 12 ಗಂಟೆ ಸುಮಾರಿಗೆ ಇಬ್ಬರು ಯುವಕರು ರವೀಂದ್ರ ಅವರ ಮನೆ ಮೇಲೆ ಕಲ್ಲುಗಳನ್ನು ತೂರಿ ಸ್ಥಳದಿಂದ ಓಡಿದ್ದಾರೆ. ರೂಮ್‌ನಲ್ಲಿ ಮಲಗಿದ್ದ ರವೀಂದ್ರರ ಮಗ ಕೀರ್ತನ್ ಮೇಲೆ ಗಾಜಿನ ಚೂರುಗಳು ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ವ್ಯಾನ್ ಚಾಲಕ ವೃತ್ತಿ ನಿರ್ವಹಿಸುತ್ತಿರುವ ರವೀಂದ್ರ ಅವರ ಮಗ ಕೀರ್ತನ್ ಮೇಲೆ ಸ್ನೇಹಿತರು ಸಾಕಷ್ಟು ಬಾರಿ ಹಲ್ಲೆ ನಡೆಸಿದ್ದರು ಎನ್ನುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.