ಕೊಡಗು: ಮಳೆಗಾಲ ಬಂದ್ರೆ ಸಾಕು, ಇಲ್ಲಿನ ಜನರಿಗೆ ಜೀವವನ್ನೇ ಕೈಯಲ್ಲಿ ಹಿಡಿದು ಬದುಕುವ ಸ್ಥಿತಿ. ಮಳೆ ಹೆಚ್ಚಾದ್ರಂತು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಮತ್ತಷ್ಟು ಅವಾಂತರ ಸೃಷ್ಟಿಸುತ್ತೆ. ಇದರ ನಡುವೆ ಇಲ್ಲಿನ ಜನರಿಗೆ ಮನೆ ಖಾಲಿ ಮಾಡುವಂತೆ ನೋಟಿಸ್ ನೀಡಲಾಗಿದೆ.
ಜಿಲ್ಲೆಯ ಕರಡಿಗೋಡು, ಬೆಟ್ಟಡದಕಾಡು, ಕುಂಬಾರಗುಂಡಿ ಹಾಗೂ ಗುಹ್ಯ ಗ್ರಾಮಗಳಲ್ಲಿ ಈ ಸಮಸ್ಯೆ ಉಂಟಾಗಿದೆ. ಮಳೆ ಹೆಚ್ಚಾದಲ್ಲಿ ತಗ್ಗು ಪ್ರದೇಶಗಳಲ್ಲಿ ನೀರಿನ ಅತಂಕ ಎದುರಾಗುತ್ತೆ. ನದಿಯ ನೀರು ಮನೆಗಳಿಗೆ ನುಗ್ಗುವ ಆತಂಕ ಇರೋದ್ರಿಂದ ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮವಾಗಿ 5 ತಿಂಗಳ ಕಾಲ ಮನೆ ಬಿಟ್ಟು ತೆರಳುವಂತೆ ಕರಡಿಗೋಡು, ಗುಹ್ಯ, ಬೆಟ್ಟದಕಾಡು ಜನತೆಯ ನೂರಾರು ಮನೆಗಳಿಗೆ ನೋಟಿಸ್ ನೀಡಿದೆ.