ಕರ್ನಾಟಕ

karnataka

ETV Bharat / state

ಮಡಿಕೇರಿ ಕ್ಷೇತ್ರಕ್ಕೆ 22 ಮಂದಿ, ವಿರಾಜಪೇಟೆಗೆ 10 ಮಂದಿ ನಾಮಪತ್ರ ಸಲ್ಲಿಕೆ

ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ 22 ಮಂದಿ ನಾಮಪತ್ರ ಸಲ್ಲಿಕೆ ಮಾಡಿದ್ದು, ವಿರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ 10 ಮಂದಿ ನಾಮಪತ್ರ ಸಲ್ಲಿಸಿದರು.

Etv Bharat
Etv Bharat

By

Published : Apr 20, 2023, 10:03 PM IST

ಕೊಡಗು :ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ಒಟ್ಟು 22 ಅಭ್ಯರ್ಥಿಗಳಿಂದ 31 ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಬಿಜೆಪಿಯಿಂದ ಅಪ್ಪಚ್ಚುರಂಜನ್ ಎಂ.ಪಿ, ಕಾಂಗ್ರೆಸ್​​ನಿಂದ ಡಾ.ಮಂಥರ್ ಗೌಡ, ಜನತಾದಳದಿಂದ ಮುತ್ತಪ್ಪ ಎನ್.ಎಂ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಸಿಪಿಐ)ದಿಂದ ಎಚ್.ಎಂ.ಸೋಮಪ್ಪ, ಬಹುಜನ ಸಮಾಜ ಪಕ್ಷದಿಂದ ದಿವಿಲ್ ಕುಮಾರ್ ಎ.ಎ ಎಂಬವರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಆರ್​​ಪಿಐ ಕರ್ನಾಟಕದಿಂದ ಕೆ.ಬಿ.ರಾಜು, ಎಸ್‍ಡಿಪಿಐ ಪಕ್ಷದಿಂದ ಅಮೀನ್ ಮೋಹಿಸಿನ್, ಜಿ.ಜಿ.ಹೇಮಂತ್ ಕುಮಾರ್(ಪಕ್ಷೇತರ), ಎಂ.ಖಲೀಲ್(ಪಕ್ಷೇತರ), ರಶೀದ ಬೇಗಂ (ಇಂಡಿಯನ್ ಮೂವೆಮೆಂಟ್ ಪಾರ್ಟಿ), ಶ್ರೀನಿವಾಸ ರೈ ಬಿ.ಕೆ.(ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ), ಅಶ್ರಫ್ (ಪಕ್ಷೇತರ), ದರ್ಶನ್ ಶೌರಿ ಪಿ.ಕೆ.(ಪಕ್ಷೇತರ), ಬೋಪಣ್ಣ ಕೆ.ಪಿ.(ಆಮ್ ಆದ್ಮಿ ಪಾರ್ಟಿ), ಹರೀಶ್ ಆಚಾರ್ಯ(ಪಕ್ಷೇತರ), ಎಂ.ಮೊಹಮ್ಮದ್ ಹನೀಫ್(ಪಕ್ಷೇತರ), ಸಜೀರ್ ಮಜೀದ್ ನೆಲಾಟ್ (ಕರ್ನಾಟಕ ರಾಷ್ಟ್ರ ಸಮಿತಿ), ಉಸ್ಮಾನ್ ಕೆ.ಎ.(ಎಸ್‍ಡಿಪಿಐ), ಹಾಶಿಮ್ ಕೆ.ಎ.(ಪಕ್ಷೇತರ), ಸಿಂಧು ವೈ.ಎಂ.(ಪಕ್ಷೇತರ), ಪದ್ಮನಾಭ ಎ.ಎನ್.(ಜನ ಸಂಘ ಪಾರ್ಟಿ), ಶೃತಿ ಕೆ.ಪಿ.(ಪಕ್ಷೇತರ) ಎ.ಬವರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕೆ.ಜಿ.ಬೋಪಯ್ಯ, ಕಾಂಗ್ರೆಸ್​ ಅಭ್ಯರ್ಥಿಯಾಗಿ ಎ.ಎಸ್​ ಪೊನ್ನಣ್ಣ, ಜನತಾದಳದಿಂದ ಮನ್ಸೂರ್​ ಅಲಿ ಎಂ.ಎ ಎಂಬವರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಎಂ.ಎ.ನಾಸೀರ್(ಪಕ್ಷೇತರ), ಸಿ.ಎಸ್.ರವೀಂದ್ರ (ಆಮ್ ಆದ್ಮಿ ಪಕ್ಷ), ಕೆ.ಎಸ್.ಮನು (ಸರ್ವೋದಯ ಕರ್ನಾಟಕ ಪಕ್ಷ), ದರ್ಶನ್ ಶೌರಿ ಪಿ.ಕೆ.(ಪಕ್ಷೇತರ), ಮಸೂದ್ ಫೌಜ್ದಾರ್(ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ), ಸಜು ವಿ.ಎ.(ಕರ್ನಾಟಕ ರಾಷ್ಟ್ರ ಸಮಿತಿ), ಎಚ್.ಪಿ.ಸರೋಜ(ಪಕ್ಷೇತರ) ಅಬ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ. ವಿರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ 10 ಮಂದಿಯಿಂದ 12 ನಾಮಪತ್ರ ಸಲ್ಲಿಕೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ :ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲ ಪಕ್ಷಗಳ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ ಭರಾಟೆ

ABOUT THE AUTHOR

...view details