ಕೊಡಗು: ಪಕ್ಷಕ್ಕೆ ಯಾರೂ ಅನಿವಾರ್ಯವಲ್ಲ. ಎಂಎಲ್‌ಸಿ ಆಗುವಾಗ ಒಂದು ರೀತಿ ಗೆದ್ದಾದ ಮೇಲೆ ಒಂಥರಾ ಇರುವುದು ಸರಿಯಲ್ಲ ಎಂದು ಅಸಮಾಧಾನಿತ ಜೆಡಿಎಸ್ ಎಂಎಲ್‌ಸಿ ಪುಟ್ಟಣ್ಣ ಹೇಳಿಕೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ತಿರುಗೇಟು ನೀಡಿದರು.
ಪಕ್ಷಕ್ಕೆ ಯಾರೂ ಅನಿವಾರ್ಯವಲ್ಲ: ಜೆಡಿಎಸ್ ರಾಜ್ಯಾಧ್ಯಕ್ಷ ಖಡಕ್ ಮಾತು - kdagu latest news
ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅವರಿಗೆ ಅಸಮಾಧಾನ ಇದ್ದರೆ ಅದನ್ನು ಎಲ್ಲಿ ಮಾತನಾಡಬೇಕು ಅಲ್ಲಿ ಮಾತನಾಡಲಿ. ಅದನ್ನು ಬಿಟ್ಟು ಸಂತೆಯಲ್ಲಿ ಹೋಗಿ ಚರ್ಚೆ ಮಾಡೋಕೆ ಆಗುತ್ತಾ.?. ಅವರ ಇಂತಹ ಹೇಳಿಕೆ ಕೊಡುವುದು ತಪ್ಪು. ಏನಾದರೂ ಸಮಸ್ಯೆಗಳಿದ್ದರೆ ಬನ್ನಿ ಮಾತನಾಡಿ ಬಗೆಹರಿಸಲು ಪ್ರಯತ್ನಿಸೋಣ ಎಂದರು.
ಸೋಮವಾರಪೇಟೆ ತಾಲೂಕಿನಲ್ಲಿ ಕೊಡ್ಲಿಪೇಟೆ ಜೆಡಿಎಸ್ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅವರಿಗೆ ಅಸಮಾಧಾನ ಇದ್ದರೆ, ಅದನ್ನು ಎಲ್ಲಿ ಮಾತನಾಡಬೇಕು ಅಲ್ಲಿ ಮಾತನಾಡಲಿ. ಅದನ್ನು ಬಿಟ್ಟು ಸಂತೆಯಲ್ಲಿ ಹೋಗಿ ಚರ್ಚೆ ಮಾಡೋಕೆ ಆಗುತ್ತಾ.?. ಅವರ ಇಂತಹ ಹೇಳಿಕೆ ಕೊಡುವುದು ತಪ್ಪು. ಏನಾದರೂ ಸಮಸ್ಯೆಗಳಿದ್ದರೆ ಬನ್ನಿ ಮಾತನಾಡಿ ಬಗೆಹರಿಸಲು ಪ್ರಯತ್ನಿಸೋಣ ಎಂದರು.
ಪಠ್ಯ ಪುಸ್ತಕದಿಂದ ಟಿಪ್ಪು ಅಧ್ಯಾಯವನ್ನ ತೆಗೆದ ತಕ್ಷಣ ಇತಿಹಾಸ ಬದಲಾಗುತ್ತಾ. ಸರ್ದಾರ್ ವಲ್ಲಭಭಾಯಿ ಪಟೇಲ್ ಅಥವಾ ಟಿಪ್ಪು ಯಾರೇ ಇರಬಹುದು ದೇಶದ ಸ್ವಾತಂತ್ರ್ಯಕ್ಕೆ ಒಂದೊಂದು ಕೊಡುಗೆ ಇರುತ್ತೆ. ಇದೀಗ ಪಠ್ಯದಿಂದ ಟಿಪ್ಪು ಪಾಠ ತೆಗೆಯಲು ಹೊರಟಿರುವ ಬಿಜೆಪಿ ಸರ್ಕಾರದ್ದು, ಒಂದು ಬಾಲಿಶ ನಡೆ. ಹಿಂದೆ ಬಿ.ಎಸ್.ಯಡಿಯೂರಪ್ಪ ಅವರು ಕೆಜೆಪಿ ಪಕ್ಷ ಕಟ್ಟಿದಂತಹ ಸಂದರ್ಭದಲ್ಲಿ ಅವರೇ ಟಿಪ್ಪು ಟೋಪಿ ಧರಿಸಿ, ಸನ್ಮಾನ ಸ್ವೀಕರಿಸಿದ್ದರು. ಆಗ ವಿರೋಧ ಇರಲಿಲ್ಲವೇ ಎಂದು ಪ್ರಶ್ನಿಸಿದರು.