ಕೊಡಗು :ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಪ್ರಾಣ ಉಳಿಸಿಕೊಳ್ಳಲು ಜನ ಪರದಾಡುತ್ತಿದ್ದಾರೆ.
ವ್ಯಾಕ್ಸಿನ್ ಹಾಕಿಸಿಕೊಳ್ಳಲು ಇಂದು ಮುಂಜಾನೆಯಿಂದ ಮಡಿಕೇರಿಯ ಕೋವಿಡ್ ಸೆಂಟರ್ ಸಂತಮೈಕಲರ ವ್ಯಾಕ್ಸಿನ್ ಸೆಂಟರ್‌ನಲ್ಲಿ ಕಾದು ಕುಳಿತ ಜನ ಸರ್ಕಾರಕ್ಕೆ ಶಾಪ ಹಾಕಿ ವಾಪಸಾಗಿದ್ದಾರೆ.
ಸರ್ಕಾರಕ್ಕೆ ಹಿಡಿಶಾಪ ಹಾಕಿದ ನೌಕರರು.. ಓದಿ: ಬಸನಗೌಡ ತುರುವಿಹಾಳಗೆ ಅಭಿನಂದನೆ ಸಲ್ಲಿಸಿದ ಸಿದ್ದರಾಮಯ್ಯ, ಎಸ್.ಆರ್.ಪಾಟೀಲ್
18 ವರ್ಷ ಮೇಲ್ಪಟ್ಟ ಜನರು ಮುಂಜಾನೆಯಿಂದ ಕಾಯುತ್ತಿದ್ದರು. ಆದರೆ, ಆಸ್ಪತ್ರೆ ಸಿಬ್ಬಂದಿ ಮುಂಜಾನೆಯಿಂದ ಯಾವ ಮಾಹಿತಿಯನ್ನು ಕೊಡದೆ ಸಂಜೆಯಾಗುತ್ತಿದ್ದಂತೆ ವ್ಯಾಕ್ಸಿನೇಷನ್ ಇಲ್ಲ ಎಂದು ಜನರಿಗೆ ಹೇಳಿದ್ದು, ಜನ ಹಿಂದಿರುಗಿದ್ದಾರೆ. 18 ವರ್ಷ ಮೇಲ್ಪಟ್ಟ ಜನರಿಗೆ ವ್ಯಾಕ್ಸಿನ್ ಇಲ್ಲ. 45 ವರ್ಷ ಮೇಲ್ಪಟ್ಟ ಜನರಿಗೆ ಮಾತ್ರ ಲಸಿಕೆ ಹಾಕುತ್ತಿದ್ದಾರೆ.
ಕೊರೊನಾ ಸಮಯದಲ್ಲಿ ಸರ್ಕಾರಿ ನೌಕರರು ತಮ್ಮ ಪ್ರಾಣದ ಹಂಗನ್ನು ತೊರೆದು ಕೆಲಸ ಮಾಡುತ್ತಿದ್ದಾರೆ. ಆದರೆ, 18 ವರ್ಷ ಮೇಲ್ಪಟ್ಟ ನೌಕರರಿಗೆ ಮತ್ತು ಜನರಿಗೆ ವ್ಯಾಕ್ಸಿನ್ ನೀಡಬೇಕು.
ನಾವು ಪ್ರತಿದಿನ ಹೊರಗೆ ಬಂದು ಕೆಲಸ ಮಾಡುತ್ತಿದ್ದೇವೆ. ನಮಗೂ ರೋಗದ ಭಯವಿದ್ದು, ಲಸಿಕೆ ಹಾಕಿಸಿಕೊಳ್ಳಲು ಬಂದಿದ್ದೇವೆ. ಆದರೆ, ಲಸಿಕೆ ಇನ್ನೂ ಬಂದಿಲ್ಲ.
ನಮಗೂ ಲಸಿಕೆ ಬೇಗ ಕೊಡಿ ಎಂದು ಸರ್ಕಾರಿ ನೌಕರರು ಬೆಳಗ್ಗೆಯಿಂದ ಕಾದು ಕುಳಿತು ಸಂಜೆಯಾಗುತ್ತಿದಂತೆ ಲಸಿಕೆ ಸಿಕ್ಕದೆ ವಾಪಸಾಗಿದ್ದಾರೆ. ಜಿಲ್ಲೆಯಲ್ಲಿ ಹೊಸದಾಗಿ ಕೋವಿಡ್ ಆಸ್ಪತ್ರೆಗಳನ್ನು ಮಾಡುತ್ತಿದ್ದು, ಜಿಲ್ಲಾಧಿಕಾರಿ ತಾಲೂಕುಗಳಿಗೆ ಹೋಗಿ ಆಸ್ಪತ್ರೆಗಳನ್ನು ಪರಿಶೀಲಿಸುತ್ತಿದ್ದಾರೆ.