ಕೊಡಗು: ಸಿಂಗಾಪುರದಲ್ಲಿ ನಡೆದ ಅಂತಾರಾಷ್ಟ್ರೀಯ ನೆಟ್ಬಾಲ್ ಕ್ರೀಡಾ ಕೂಟದಲ್ಲಿ ಭಾರತಕ್ಕೆ 8ನೇ ಸ್ಥಾನ ತಂದುಕೊಟ್ಟ ತಂಡದ ಉಪನಾಯಕಿಯಾಗಿದ್ದ ಕೊಡಗು ಮೂಲದ ಅಂತಾರಾಷ್ಟ್ರೀಯ ಕ್ರೀಡಾಪಟು ಮೇಘನಾ ಅವರಿಗೆ ಗಡಿಯಲ್ಲಿ ಅದ್ದೂರಿಯಾಗಿ ಸ್ವಾಗತ ಕೋರಲಾಯಿತು.
ನೆಟ್ಬಾಲ್ ಕ್ರೀಡಾಪಟು ಮೇಘನಾಗಿ ಸ್ವಾಗತ ಕೊಡಗು ಜಿಲ್ಲೆಯ ಗೋಣಿಕೊಪ್ಪ ಮೂಲದ ಕ್ರೀಡಾಪಟು ಮೇಘನಾ ಪಂದ್ಯ ಮುಗಿಸಿ ಹುಟ್ಟೂರಿಗೆ ಆಗಮಿಸಿದ್ದು, ಶಿವಾಜಿ ಯುವ ಸೇನೆ ಸಂಘಟನೆಯು ಕೊಡಗಿನ ಗಡಿ ಭಾಗ ಆನೇ ಚೌಕೂರು ಬಳಿ ಅವರಿಗೆ ಆರತಿಮಾಡಿ ಹೂವಿನ ಹಾರ ಹಾಕುವ ಮೂಲಕ ಸ್ವಾಗತ ಮಾಡಿಕೊಂಡರು. ಗೋಣಿಕೊಪ್ಪದಲ್ಲಿ ಮೆರವಣಿಗೆ ಮಾಡಿ ಸ್ವಾಗತಿಸಿದರು.
ಈ ಕುರಿತು ಮಾತನಾಡಿದ ಮೇಘನಾ, ನಾನು ಭಾರತದ ಕೊಡಗಿನಿಂದ ಸಿಂಗಾಪುರದಲ್ಲಿ ನಡೆದ ನೆಟ್ಬಾಲ್ ಕ್ರೀಡಾಕೂಟದಲ್ಲಿ ಭಾಗವಹಿಸಿರುವುದು ಖುಷಿ ತಂದಿದ್ದು, ಮುಂದಿನ ತಿಂಗಳು ಥಾಯ್ಲೆಂಡ್ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ನೆಟ್ಬಾಲ್ ಪಂದ್ಯದಕ್ಕೆ ನಮ್ಮ ತಂಡ ಆಯ್ಕೆಯಾಗಿದೆ ಎಂದು ಹರ್ಷವ್ಯಕ್ತಪಡಿಸಿದರು. ಇನ್ನು ಕೊಡಗಿನಲ್ಲಿ ಹೆಚ್ಚಿನ ಕ್ರೀಡಾಪಟುಗಳಿದ್ದು, ಅವರಿಗೆ ತರಬೇತಿ ಕೇಂದ್ರಗಳ ಅಗತ್ಯವಿದೆ. ಕ್ರೀಡೆಗೆ ಸಂಬಂಧಿಸಿದಂತೆ ಜಿಲ್ಲೆಗೆ ಹೆಚ್ಚಿನ ಸೌಕರ್ಯಗಳನ್ನು ಒದಗಿಸಬೇಕು. ಕ್ರೀಡಾ ಪಟುಗಳಿಗೆ ಹೆಚ್ಚು ಉತ್ತೇಜನ ನೀಡಬೇಕು. ಆಗ ಮಾತ್ರ ಇಲ್ಲಿಯ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ತಿಳಿಸಿದರು.
ಇದನ್ನೂ ಓದಿ:ವಿಶ್ವ ಕುಸ್ತಿ ಚಾಂಪಿಯನ್‌ಶಿಪ್: ಕಂಚಿನ ಪದಕ ಗೆದ್ದ ವಿನೇಶ್ ಫೋಗಟ್