ಕೊಡಗು :ಮೈಸೂರು ಸಾಮೂಹಿಕ ಅತ್ಯಾಚಾರದಂತಹ ಪ್ರಕರಣಗಳಿಂದ ಮಹಿಳೆಯರಿಗೆ ರಕ್ಷಣೆ ಇಲ್ಲದಂತೆ ಭಾಸವಾಗುತ್ತದೆ ಎಂದು ರಾಷ್ಟ್ರೀಯ ಮಹಿಳಾ ಹಾಕಿ ಕೋಚ್ ಅಂಕಿತಾ ಸುರೇಶ್ ಬೇಸರ ವ್ಯಕ್ತಪಡಿಸಿದರು.
ರಾಷ್ಟ್ರೀಯ ಮಹಿಳಾ ಹಾಕಿ ಕೋಚ್ ಅಂಕಿತಾ ಸುರೇಶ್ ಪ್ರತಿಕ್ರಿಯೆ ಮಡಿಕೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ಲಾ ಮಹಿಳೆಯರಿಗೂ ಸುರಕ್ಷತೆಬೇಕು. ರಕ್ಷಣೆ ಕೊಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಆದ್ರೆ, ರಕ್ಷಣೆ ಸಿಕ್ಕಿಲ್ಲ. ಮುಂದೆ ಯಾರು ಬೀದಿಕಾಮುಕರು ಹೆಣ್ಣನ್ನು ಮುಟ್ಟುವ ಧೈರ್ಯ ಮಾಡಬಾರದು. ಆ ರೀತಿಯ ಶಿಕ್ಷೆ ಕೊಡಬೇಕು. ಇಂತಹ ಘಟನೆಗಳಿಂದ ಹೆಣ್ಣು ಮಕ್ಕಳು ಹೊರಗೆ ಬರಲು ಹೆದರುವಂತಾಗಿದೆ. ಇನ್ನೂ ಹೆಣ್ಣು ಮಕ್ಕಳ ಸಾಧನೆ ಹೇಗೆ ಸಾಧ್ಯ ಎಂದರು.
ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯದಂತಹ ಪ್ರಕರಣ ಹೆಚ್ಚಾಗುತ್ತಿವೆ. ಸಾರ್ವಜನಿಕ ಸ್ಥಳಗಳಲ್ಲಿ ಒಂಟಿ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ರೆ ಸಾವರ್ಜನಿಕರು ರಕ್ಷಣೆಗೆ ಬರಬೇಕು. ಕಾಮುಕರಿಗೆ ತಕ್ಕ ಪಾಠ ಕಲಿಸಬೇಕು. ದೌರ್ಜನ್ಯಕ್ಕೊಳಗಾದ ಹೆಣ್ಣಿಗೆ ಮಾತ್ರ ಅಲ್ಲ. ಇದು ಎಲ್ಲಾ ಹೆಣ್ಣು ಮಕ್ಕಳಿಗೆ ನೋವು ಉಂಟು ಮಾಡಿದೆ ಎಂದರು.
ಘಟನೆಗೆ ಬಗ್ಗೆ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕು. ಹೆಣ್ಣು ಮಕ್ಕಳನ್ನು ಮುಟ್ಟುವವರಿಗೆ ಭಯ ಹುಟ್ಟಿಸುವಂತಹ ಒಂದು ದೃಢ ಕಾನೂನನ್ನು ಸರ್ಕಾರ ಮಾಡಬೇಕು. ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಂಡು ಹೆಣ್ಣು ಮಕ್ಕಳಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕಿದೆ. ಕೃತ್ಯ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದರು.
ಓದಿ: ಮೈಸೂರು ಬಳಿಕ ಬೆಳಗಾವಿಯಲ್ಲೂ ಹೇಯ ಕೃತ್ಯ: ಅಪ್ರಾಪ್ತೆ ಮೇಲೆ ಗ್ಯಾಂಗ್ ರೇಪ್..!