ಕರ್ನಾಟಕ

karnataka

ETV Bharat / state

ಲಾಕ್​ಡೌನ್​ ಮೀರಿ ಮಸೀದಿಯಲ್ಲಿ ನಮಾಜ್​: 11 ಮಂದಿ ವಿರುದ್ಧ ಕೊಡಗಿನಲ್ಲಿ ಪ್ರಕರಣ

ರಾಜ್ಯದಲ್ಲಿ ಕೊರೊನಾ ಮಹಾಮಾರಿಯ ಅಟ್ಟಹಾಸ ಮುಂದುವರೆದಿದೆ. ಈ ಬಗ್ಗೆ ಸರ್ಕಾರ ಲಾಕ್‌ಡೌನ್ ಆದೇಶ ನೀಡಿದರೂ ಮೀರಿ ‌ನಮಾಜ್‌ಗೆ ಹೊರ ಬಂದಿದ್ದವರ ಮೇಲೆ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

dfsfdf
ಲಾಕ್​ಡೌನ್​ ಮೀರಿ ಮಸೀದಿಯಲ್ಲಿ ನಮಾಜ್​,11 ಮಂದಿ ವಿರುದ್ಧ ಕೊಡಗಿನಲ್ಲಿ ಪ್ರಕರಣ

By

Published : Mar 27, 2020, 6:45 PM IST

ಕೊಡಗು: ಕೊರೊನಾ ಲಾಕ್‌ಡೌನ್ ಮೀರಿ ‌ನಮಾಜ್‌ಗೆ ಹೊರ ಬಂದಿದ್ದವರ ಮೇಲೆ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಾಕ್​ಡೌನ್​ ಮೀರಿ ಮಸೀದಿಯಲ್ಲಿ ನಮಾಜ್​,11 ಮಂದಿ ವಿರುದ್ಧ ಕೊಡಗಿನಲ್ಲಿ ಪ್ರಕರಣ

ನಗರದ ಕನಕದಾಸ ರಸ್ತೆಯಲ್ಲಿರುವ ಮೆಕ್ಕಾ ಮಸೀದಿಯಲ್ಲಿ ನಮಾಜ್ ಮಾಡಲು 11 ಜನ ಮನೆಯಿಂದ ಹೊರ ಬಂದಿದ್ದರು ಎನ್ನಲಾಗಿದೆ. ‌ಕೊರೊನಾ ಸೋಂಕಿನ ಭೀತಿಯ ಹಿನ್ನೆಲೆ ಈಗಾಗಲೇ ಜಿಲ್ಲಾಡಳಿತ ಯಾವುದೇ ಮಸೀದಿ, ಚರ್ಚ್ ಹಾಗೂ ದೇವಾಲಯಗಳಲ್ಲಿ ಪೂಜೆ, ಪ್ರಾರ್ಥನೆ ಮಾಡದಂತೆ ಆಯಾ ಧಾರ್ಮಿಕ ಮುಖಂಡರೊಂದಿಗೆ ಸಭೆ ನಡೆಸಿದೆ.

ಹೀಗಿದ್ದರೂ ಜಿಲ್ಲಾಡಳಿತದ ನಿಯಮಗಳನ್ನು ಉಲ್ಲಂಘಿಸಿ ನಮಾಜ್‌ಗೆ ತೆರಳಿದ್ದಾರೆ. ಜಿಲ್ಲಾಧಿಕಾರಿ ಅನೀಸ್ ಕೆ.ಜಾಯ್ ನಿಯಮ ಉಲ್ಲಂಘಿಸಿ ಹೊರಗೆ ಬಂದರೆ ಹೋಂ ಕ್ವಾರಂಟೈನ್‌ನಲ್ಲಿ ಇಡುವುದಾಗಿ ಎಚ್ಚರಿಕೆ ನೀಡಿರುವುದರಿಂದ ದೂರು ದಾಖಲಾದ ಎಲ್ಲರನ್ನೂ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸುವ ಸಾಧ್ಯತೆಗಳಿವೆ‌.

ABOUT THE AUTHOR

...view details