ಕೊಡಗು:ಪ್ರೀತಿಸುವಾಗ ಅಡ್ಡ ಬರದ ಧರ್ಮ ಮದುವೆಯಾಗುವಾಗ ಅಡ್ಡ ಬರುವುದೇಕೆ ಎನ್ನುವ ಮೂಲಕ ವಿವಾಹಕ್ಕೆ ಮೊದಲು ಮತಾಂತರ ತಡೆಯುವ ಕಾನೂನು ರೂಪಿಸುತ್ತೇವೆ ಎಂಬ ಸಚಿವ ಸಿ.ಟಿ.ರವಿ ಹೇಳಿಕೆಯನ್ನು ಸಂಸದ ಪ್ರತಾಪ್ ಸಿಂಹ ಸಮರ್ಥಿಸಿಕೊಂಡಿದ್ದಾರೆ.
ಪ್ರೀತಿಸುವಾಗ ಅಡ್ಡ ಬರದ ಧರ್ಮ ಮದುವೆ ಬಳಿಕ ಅಡ್ಡ ಬರುವುದೇಕೆ: ಸಂಸದ ಪ್ರತಾಪ್ ಸಿಂಹ - ಲವ್ ಜಿಹಾದ್ ಕಾನೂನು ಬಗ್ಗೆ ಸಿಟಿ ರವಿ ಹೇಳಿಕೆ
ಲವ್ ಜಿಹಾದ್ ತಡೆಯಲು ರಾಜ್ಯದಲ್ಲಿ ಕಾನೂನು ರೂಪಿಸುತ್ತೇವೆ ಎಂಬ ಸಚಿವ ಸಿ.ಟಿ.ರವಿ ಹೇಳಿಕೆಯನ್ನು ಸಂಸದ ಪ್ರತಾಪ್ ಸಿಂಹ ಸಮರ್ಥಿಸಿಕೊಂಡಿದ್ದಾರೆ.

ಉತ್ತರ ಪ್ರದೇಶದಲ್ಲಿ ವಿವಾಹವಾಗುವ ಮೊದಲು ಮತಾಂತರಕ್ಕೆ ಒತ್ತಡ ಹೇರುವಂತಿಲ್ಲ. ಒಂದು ವೇಳೆ ಹಾಗೆ ಮಾಡಿದರೆ ಅಂತವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ನಮ್ಮಲ್ಲಿ ಕೂಡ ಆ ರೀತಿಯ ಕಾನೂನು ಜಾರಿ ಮಾಡುವುದಾಗಿ ಸಿ.ಟಿ.ರವಿ ಹೇಳಿದ್ದರು. ಇದನ್ನು ಪ್ರತಾಪ್ ಸಿಂಹ ಸಮರ್ಥಿಸಿಕೊಂಡಿದ್ದಾರೆ.
ಮದುವೆಯಾಗಲು ಮತಾಂತರ ಆಗುವುದು ಕಡ್ಡಾಯ ಎನ್ನುವವರು ನಿಜವಾಗಿ ಧರ್ಮಾಂಧರು. ಕೆಲವರಲ್ಲಿ ರಕ್ತಗತವಾಗಿಯೇ ಮತಾಂಧತೆ ಅಡಗಿದೆ. ಸಿಎಂ ಯಡಿಯೂರಪ್ಪನವರು ರಾಜ್ಯದಲ್ಲಿ ಟಿಪ್ಪು ಜಯಂತಿಯನ್ನು ರದ್ದುಪಡಿಸಿದಂತೆ ಮುಂದಿನ ದಿನಗಳಲ್ಲಿ ಲವ್ ಜಿಹಾದ್‌ಗೆ ಕಠಿಣವಾದ ಕಾನೂನು ರೂಪಿಸುತ್ತಾರೆ ಎಂಬ ಭರವಸೆ ಇದೆ ಎಂದು ಪ್ರತಾಪ್ ಸಿಂಹ ಹೇಳಿದರು.