ಕೊಡಗು: ಸುಮಲತಾ ಅವರ ಬಗ್ಗೆ ತುಂಬ ಅಭಿಮಾನ ಇದೆ. ನಟನೆ ಬೇರೆ, ರಾಜಕಾರಣವೇ ಬೇರೆ. ನಾನು ಹೇಳಿಕೆ ಕೊಟ್ಟಿರೊದು ಕುಮಾರಸ್ವಾಮಿ ಪರನೂ ಅಲ್ಲ, ನಿಮ್ಮ ವಿರುದ್ಧವೂ ಅಲ್ಲ ಎಂದು ಸಂಸದ ಪ್ರತಾಪ್ ಸಿಂಹ ಮಡಿಕೇರಿಯಲ್ಲಿ ಹೇಳಿದರು.
ಮಂಡ್ಯದಲ್ಲೊಂದು ಕಟ್ಟೆ ಇರಬಹುದು, ಅದಕ್ಕೆ ಹರಿದು ಬರೋ ನೀರು ಕೊಡಗಿನದ್ದು: ಪ್ರತಾಪ್ ಸಿಂಹ - MP Pratap Simha
ಕೆಆರ್‌ಎಸ್ ಬಿರುಕು ಬಿಟ್ಟಿದ್ರೆ ತೋರಿಸಲಿ. ಅದಕ್ಕೊಂದು ನಿಯೋಗ ಕರೆದುಕೊಂಡು ಹೋಗಿ ತೋರಿಸಲಿ. ಕೆಆರ್‌ಎಸ್ ಅದೆಷ್ಟೋ ಮಂದಿಗೆ ಆಸರೆಯಾಗಿದೆ. ಹಾಗಾಗಿ ಈ ವಿಚಾರವನ್ನು ಮಾತನಾಡಿದ್ದೇನೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.

ಸಂಸದ ಪ್ರತಾಪ್ ಸಿಂಹ ಹೇಳಿಕೆ
ಮಂಡ್ಯದಲೊಂದು ಕಟ್ಟೆ ಇರಬಹುದು, ಆದರೆ ಅದಕ್ಕೆ ಹರಿದು ಬರೋ ನೀರು ಕೊಡಗಿನದ್ದು. ಕೊಡಗಿನ ಜೀವ ನದಿ ಕಾವೇರಿ ಉಗಮ ಸ್ಥಾನದ ಸಂಸದನಾಗಿ ನಾನು ಮಾತನಾಡುತ್ತಿದ್ದೇನೆ. ಕೆಆರ್‌ಎಸ್ ಬಿರುಕು ಬಿಟ್ಟಿದ್ರೆ ತೋರಿಸಲಿ. ಅದಕ್ಕೆ ಒಂದು ನಿಯೋಗವನ್ನು ಕರೆದುಕೊಂಡು ಹೋಗಿ ತೋರಿಸಲಿ. ಕೆಆರ್‌ಎಸ್ ಅದೆಷ್ಟೋ ಮಂದಿಗೆ ಆಸರೆಯಾಗಿದೆ. ಹಾಗಾಗಿ ಈ ವಿಚಾರವನ್ನು ಮಾತನಾಡಿದ್ದೇನೆ. ಬಿರುಕು ಬಿಟ್ಟಿದೆ ಅನ್ನುತ್ತಿರೋರು ನೀವು ಅದನ್ನು ಸಾಬೀತುಪಡಿಸಿ. ಕೆಆರ್‌ಎಸ್ ಇಡೀ ರಾಷ್ಟ್ರದ ಆಸ್ತಿ ಎಂದರು.
ಇದನ್ನೂ ಓದಿ: KRS ಅಣೆಕಟ್ಟೆಯಲ್ಲಿ ಯಾವುದೇ ಬಿರುಕಿಲ್ಲ: ಕಾವೇರಿ ನೀರಾವರಿ ನಿಗಮ ಸ್ಪಷ್ಟನೆ