ಕೊಡಗು:ಲಾಡ್ಜ್ನಲ್ಲಿ ತಾಯಿ ಮಗ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ತಾಯಿ ಅಸುನೀಗಿದರೆ ಮಗ ಆಸ್ಪತ್ರೆ ಪಾಲಾಗಿರುವ ಘಟನೆ ನಡೆದಿದೆ.
ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪಲು ಪೂಜಾರಿ ಆರ್ಕೇಡ್ನಲ್ಲಿರುವ ಲಾಡ್ಜ್ನಲ್ಲಿ ನಾಪೋಕ್ಲು ಸಮೀಪದ ಪೇರೂರು ಗ್ರಾಮದ ಮಹಿಳೆ ಪ್ರಭಾವತಿ ಸಿ.ಎಸ್.(70) ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ, ತಾಯಿ ಜೊತೆ ವಿಷ ಸೇವಿಸಿದ್ದ ಮಗ ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದಾನೆ.
ಏ.7ರಂದು ಮಧ್ಯಾಹ್ನದ ವೇಳೆ ಲಾಡ್ಜ್ಗೆ ಆಗಮಿಸಿ, ತೋಲಂಡ ಸುಭಾಶ್ ಚಂಗಪ್ಪ ಎಂಬ ಹೆಸರಿನಲ್ಲಿ ರೂಮ್ ಬುಕ್ ಮಾಡಿದ್ದರು. ಶುಕ್ರವಾರ ಸಂಜೆಯ ವೇಳೆ
ಲಾಡ್ಜ್ನಲ್ಲಿ ವಿಪರೀತ ಕೀಟನಾಶಕದ ವಾಸನೆ ಬಂದ ಹಿನ್ನೆಲೆ ಸಿಬ್ಬಂದಿ ಬಾಗಿಲಿನ ಬಳಿ ತೆರಳಿ ಪರಿಶೀಲನೆ ನಡೆಸಿದ ವೇಳೆ ಘಟನೆ ಬೆಳಕಿಗೆ ಬಂದಿದೆ.
ತಕ್ಷಣ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರ ಸಮ್ಮುಖದಲ್ಲೇ ಕೊಠಡಿ ತೆರದಿದ್ದಾರೆ. ಈ ವೇಳೆಗಾಗಲೇ ತಾಯಿ ವಿಷ ಸೇವಿಸಿ ಪ್ರಾಣಬಿಟ್ಟಿದ್ದರೆ ಮಗ ನರಳಾಡುತ್ತಿದ್ದ. ತಕ್ಷಣವೇ ಆತನನ್ನು ಹತ್ತಿರದ ಗೋಣಿಕೊಪ್ಪ ಆರೋಗ್ಯ ಕೇಂದ್ರಕ್ಕೆ ರವಾನಿಸಿ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಇದನ್ನೂ ಓದಿ:ಓವರ್ ಟೇಕ್ ಮಾಡುವ ಧಾವಂತದಲ್ಲಿ ಬಸ್-ಬೈಕ್ ಅಪಘಾತ: ವ್ಯಕ್ತಿ ಸಾವು