ಕೊಡಗು: ಆಸ್ತಿ ವಿಚಾರಕ್ಕೆ ಮಗನ ಜೊತೆ ತಾಯಿ ಸೇರಿಕೊಂಡು ಮೈದುನನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಡಿಕೇರಿ ತಾಲೂಕಿನ ಪೆರಾಜೆಯಲ್ಲಿ ನಡೆದಿದೆ.
ಆಸ್ತಿ ವಿಚಾರಕ್ಕೆ ವ್ಯಕ್ತಿಯ ಬರ್ಬರ ಹತ್ಯೆ - Latest crime news
ಆಸ್ತಿ ವಿಚಾರಕ್ಕಾಗಿ ಮಗನ ಜೊತೆ ತಾಯಿ ಸೇರಿಕೊಂಡು ಮೈದುನನಿಗೆ ಕತ್ತಿಯಿಂದ ಬರ್ಬರವಾಗಿ ಇರಿದು ಕೊಲೆ ಮಾಡಿದ್ದಾರೆ.
ಕೊಲೆ
ಮಡಿಕೇರಿ ತಾಲೂಕಿನ ಪೆರಾಜೆ ನಿವಾಸಿ ಉತ್ತರ ಕುಮಾರ (34) ಕೊಲೆಯಾದ ವ್ಯಕ್ತಿ. ತಾರಿಣಿ (45) ಹಾಗೂ ಮಗ ಧರಣಿ (18) ಆಸ್ತಿ ವಿಚಾರಕ್ಕೆ ಕತ್ತಿಯಿಂದ ಬರ್ಬರವಾಗಿ ಇರಿದು ಕೊಲೆ ಮಾಡಿದ ಆರೋಪಿಗಳು ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಚಂದ್ರಶೇಖರ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.