ಮಡಿಕೇರಿ (ಕೊಡಗು): ಕೋವಿಡ್ನಿಂದಾಗಿ ಮೃತಪಟ್ಟ ಮಹಿಳೆಯೊಬ್ಬರ ಪುತ್ರಿ, ತನ್ನ ಅಮ್ಮನ ಮೊಬೈಲ್ ಹುಡುಕಿಕೊಡಿ ಎಂದು ತಿಂಗಳ ಹಿಂದೆ ಜಿಲ್ಲಾಧಿಕಾರಿ ಹಾಗೂ ಪೊಲೀಸರಿಗೆ ಪತ್ರದ ಮುಖೇನ ಮನವಿ ಮಾಡಿದ್ದಳು.
ಅದರಲ್ಲಿ ನನ್ನ ತಾಯಿಯ ಕೊನೆಯ ನೆನಪುಗಳಿವೆ, ಆದರೆ ತಾಯಿ ಮೃತಪಟ್ಟಾಗ ಮೊಬೈಲ್ ಕಳುವಾಗಿತ್ತು ಎಂದು ಬಾಲಕಿ ತಿಳಿಸಿದ್ದಳು. ಇದೀಗ ಈ ಬಾಲಕಿಯ ಪ್ರಾರ್ಥನೆ ಫಲಿಸಿದೆ. ಕಳೆದು ಹೋಗಿದ್ದ ಮೊಬೈಲ್ ಪತ್ತೆಯಾಗಿದೆ.
ಕೈಸೇರಿತು ಕೋವಿಡ್ನಿಂದ ಮೃತಪಟ್ಟ ತಾಯಿಯ ಮೊಬೈಲ್ ಮೊಬೈಲ್ ಹುಡುಕಲು ಮಡಿಕೇರಿ ನಗರದ ಪೊಲೀಸರು ಹರಸಾಹಸವನ್ನೇ ಮಾಡಬೇಕಾಗಿತ್ತು. ಒಬ್ಬ ವ್ಯಕ್ತಿಯ ಬಂಧನವೂ ಆಗಿತ್ತು. ಆದ್ರೆ ಇದ್ಯಾವುದೂ ಪ್ರಯೋಜನಕ್ಕೆ ಬಂದಿರಲಿಲ್ಲ. ಇದೀಗ ಆಸ್ಪತ್ರೆಯ ಸ್ಟೋರ್ ರೂಮ್ ಸ್ವಚ್ಛಗೊಳಿಸುವಾಗ ಬಾಲಕಿಯ ತಾಯಿಯ ಮೊಬೈಲ್ ಪತ್ತೆಯಾಗಿದ್ದು, ಸಿಬ್ಬಂದಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದರು. ನಂತರ ಬಾಲಕಿಯನ್ನು ಠಾಣೆಗೆ ಕರೆಸಿ, ಮೊಬೈಲ್ ಹಸ್ತಾಂತರಿಸಿದ್ದಾರೆ. ಅಮ್ಮನ ಮೊಬೈಲ್ ಕೈಸೇರಿದ ಖುಷಿಯಲ್ಲಿರುವ ಬಾಲಕಿ ಪೊಲೀಸರಿಗೆ ಧನ್ಯವಾದ ಅರ್ಪಿಸಿದಳು.
ಇದನ್ನೂ ಓದಿ:ಅಮ್ಮನ ನೆನಪು ಮೊಬೈಲ್ನಲ್ಲಿದೆ ದಯವಿಟ್ಟು ಹುಡುಕಿಕೊಡಿ.. ಜಿಲ್ಲಾಧಿಕಾರಿಗೆ ಪತ್ರ ಬರೆದ ಪುತ್ರಿ