ಕೊಡಗು(ತಲಕಾವೇರಿ): ಕಾವೇರಿ ತೀರ್ಥೋದ್ಭವದಲ್ಲಿ ಭಾಗವಹಿಸಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತೀರ್ಥೋದ್ಭವದಲ್ಲಿ ಭಾಗವಹಿಸಲು ಅವಕಾಶ ನೀಡದ್ದಕ್ಕೆ ಜಿಲ್ಲಾಡಳಿತ ವಿರುದ್ಧ ಎಂಎಲ್‌ಸಿ ಅಸಮಾಧಾನ - Cauveri Theerthodbhav latest update
ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ನಡೆಯುವ ಕಾವೇರಿ ತೀರ್ಥೋದ್ಭವದಲ್ಲಿ ಭಾಗವಹಿಸಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
![ತೀರ್ಥೋದ್ಭವದಲ್ಲಿ ಭಾಗವಹಿಸಲು ಅವಕಾಶ ನೀಡದ್ದಕ್ಕೆ ಜಿಲ್ಲಾಡಳಿತ ವಿರುದ್ಧ ಎಂಎಲ್‌ಸಿ ಅಸಮಾಧಾನ mlc-veena-achchyya-upset-over-district-councils-refusal-for-theerthodbhav](https://etvbharatimages.akamaized.net/etvbharat/prod-images/768-512-9205264-thumbnail-3x2-sss.jpg)
ಈ ಸಂಬಂಧ ಮಾಧ್ಯಮದೊಂದಿಗೆ ತಲಕಾವೇರಿ ಹೆಬ್ಬಾಗಿನಲ್ಲೇ ಮಾತನಾಡಿ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಕೊಡಗಿನ ಪದ್ಧತಿ ಬಗ್ಗೆ ಇಲ್ಲಿನ ಜಿಲ್ಲಾಧಿಕಾರಿಗಳಿಗೆ ಏನು ಗೊತ್ತು?. ತೀರ್ಥೋದ್ಭವ ವರ್ಷಕ್ಕೆ ಒಂದೇ ಬಾರಿ ಆಗುವುದು. ಅದರಲ್ಲೂ ಭಾಗವಹಿಸಲು ಬಿಡದೆ ಇದ್ದರೆ ಹೇಗೆ..?. ಇದು ಭಾರತವೇ ಅಥವಾ ಪಾಕಿಸ್ತಾನವೇ?. ಎಲ್ಲದಕ್ಕೂ ಕೊರೊನಾ ಕೊರೊನಾ ಎಂದರೆ ಹೇಗೆ?. ಎಲ್ಲವನ್ನು ಅವರ ಇಚ್ಛೆಯಂತೆ ಮಾಡಿದರೆ ಹೇಗೆ ಎಂದು ಗುಡುಗಿದರು.
ಜಿಲ್ಲಾಡಳಿತ ಆದೇಶದಂತೆ ಪೊಲೀಸರು ವರ್ತಿಸುತ್ತಿದ್ದಾರೆ. ಅವರು ತಾನೆ ಏನು ಮಾಡುತ್ತಾರೆ. ಉಸ್ತುವಾರಿ ಸಚಿವರು ಬರಲಿ ಅವರ ಜೊತೆಯೇ ಈ ಬಗ್ಗೆ ಮಾತನಾಡುತ್ತೇನೆ ಎಂದು ಬೇಸರದಿಂದಲೇ ಹಿಂತಿರುಗಿದರು.