ವಿರಾಜಪೇಟೆ (ಕೊಡಗು):ಕೊಡಗಿನ ಕೃಷಿಕ ಸೋಮೆಂಗಡ ಗಣೇಶ್ ತಿಮ್ಮಯ್ಯ ಅವರಿಗೆ ಬಾಬು ಜಗಜೀವನ್ ರಾವ್ ಕೃಷಿ ಸಮ್ಮಾನ್ ರಾಷ್ಟ್ರ ಪ್ರಶಸ್ತಿ ದೊರೆತಿದ್ದಕ್ಕೆ ಅವರನ್ನು ನಲ್ಲೂರಿನ ಸ್ವಗೃಹದಲ್ಲಿ ಶಾಸಕ ಕೆ.ಜಿ.ಬೋಪಯ್ಯ ಸನ್ಮಾನಿಸಿದರು.
ಯಂತ್ರದ ಮೂಲಕ ನಾಟಿ ಮಾಡಿದ ಶಾಸಕ ಕೆ ಜಿ ಬೋಪಯ್ಯ - virajapete news
ಶಾಸಕ ಕೆ.ಜಿ.ಬೋಪಯ್ಯ ಯಂತ್ರದ ಮೂಲಕ ಗದ್ದೆಯಲ್ಲಿ ನಾಟಿ ಮಾಡಿದರು. ಬೆಳೆಗಾರರು ಆಧುನಿಕ ಯಂತ್ರ ಬಳಸಿ ವ್ಯವಸಾಯ ಮಾಡಿದರೆ ಹೆಚ್ಚಿನ ಲಾಭ ಪಡೆಯಬಹುದು ಎಂದು ತಿಳಿಸಿದರು.
![ಯಂತ್ರದ ಮೂಲಕ ನಾಟಿ ಮಾಡಿದ ಶಾಸಕ ಕೆ ಜಿ ಬೋಪಯ್ಯ agriculture](https://etvbharatimages.akamaized.net/etvbharat/prod-images/768-512-8107501-760-8107501-1595307545395.jpg)
agriculture
ನಾಟಿ ಮಾಡಿದ ಶಾಸಕ ಕೆ ಜಿ ಬೋಪಯ್ಯ
ಈ ಸಂದರ್ಭದಲ್ಲಿ ಅವರು ಯಂತ್ರದ ಮೂಲಕ ಅವರ ಗದ್ದೆಯಲ್ಲಿ ನಾಟಿ ಮಾಡಿದರು. ತಾಲೂಕು ಅಧ್ಯಕ್ಷ ನೆಲ್ಲಿರ ಚಲನ್, ಮಲ್ಲಂಡ ಮಧು ದೇವಯ್ಯ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆ.ಜಿ.ಬೋಪಯ್ಯ, ಕೊಡಗು ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ಕಳೆದ ಹಲವಾರು ವರ್ಷಗಳಿಂದ ಕಾಡು ಪ್ರಾಣಿಗಳು, ಕಾರ್ಮಿಕರ ಕೊರತೆಯಿಂದ ಭತ್ತದ ಕೃಷಿ ಮಾಡುವವರು ನಷ್ಟ ಅನುಭವಿಸುತ್ತಿದ್ದಾರೆ. ಆದುದರಿಂದ ಬೆಳೆಗಾರರು ಆಧುನಿಕ ಯಂತ್ರ ಬಳಸಿ ವ್ಯವಸಾಯ ಮಾಡಿದರೆ ಹೆಚ್ಚಿನ ಲಾಭ ಪಡೆಯಬಹುದು ಎಂದು ತಿಳಿಸಿದರು.