ಕೊಡಗು: ರಾಜ್ಯದಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿದೆ. ಈ ವೇಗವನ್ನು ತಡೆಯಲು ರಾಜ್ಯದಲ್ಲಿ ಸಂಪೂರ್ಣ ಲಾಕ್ಡೌನ್ ಮಾಡಬೇಕು ಎಂದು ಶಾಸಕ ಕೆ.ಜಿ ಬೋಪಯ್ಯ ವಿರಾಜಪೇಟೆಯಲ್ಲಿ ಹೇಳಿದ್ದಾರೆ.
ಕೊರೊನಾ ಕಡಿವಾಣಕ್ಕೆ ಲಾಕ್ಡೌನ್ ಅಗತ್ಯ: ಕೆ.ಜಿ ಬೋಪಯ್ಯ - ವಿರಾಜಪೇಟೆ
ಕೊರೊನಾ ನಿಯಂತ್ರಣಕ್ಕೆ ರಾಜ್ಯದಲ್ಲಿ ಸಂಪೂರ್ಣ ಲಾಕ್ಡೌನ್ ಮಾಡಬೇಕು ಎಂದು ಕೊಡಗಿನಲ್ಲಿ ಶಾಸಕ ಜಿ ಬೋಪಯ್ಯ ಒತ್ತಾಯಿಸಿದರು.
ಲಾಕ್ಡೌನ್ ಅಗತ್ಯ ಎಂದ ಲಾಕ್ಡೌನ್ ಅಗತ್ಯ
ರಾಜ್ಯದಲ್ಲಿ ಲಾಕ್ಡೌನ್ ಆಗಬೇಕಿದೆ. ಇಲ್ಲದಿದ್ದರೆ ಸೋಂಕು ಹರಡುವುದು ನಿಯಂತ್ರಣಕ್ಕೆ ಬರುವುದಿಲ್ಲ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಸರ್ಕಾರ ಇದನ್ನ ಗಂಭೀರವಾಗಿ ಪರಿಗಣಿಸಬೇಕಿದೆ. ಶೀಘ್ರದಲ್ಲೇ ಕೇಂದ್ರದಿಂದ ಸೂಚನೆ ಸಿಗಬಹುದು ಎಂದರು.
ಕರ್ನಾಟಕ ಮುಂದಿನ ದಿನಗಳಲ್ಲಿ ಡೇಂಜರಸ್ ರೆಡ್ ಏರಿಯಾ ಎಂದು ಪರಿಗಣನೆಯಾಗಬಹುದು ಎಂದು ಬೋಪಯ್ಯ ಆತಂಕ ವ್ಯಕ್ತಪಡಿಸಿದರು.