ಕರ್ನಾಟಕ

karnataka

ETV Bharat / state

ಎಸಿಬಿ ದಾಳಿ ಹೆಸರಲ್ಲಿ ವಿರಾಜಪೇಟೆ ಶಾಸಕರ ಸುಲಿಗೆ ಯತ್ನ: ಆರೋಪಿ ಅರೆಸ್ಟ್‌ - MLA K G Boppayya spoke about ACB Ride Threat

ಕೆಲ ದಿನಗಳ ಹಿಂದೆ ಶಾಸಕ‌ ಕೆ.ಜಿ.ಬೋಪಯ್ಯ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ನಿಮ್ಮ ಮೇಲೆ ಎಸಿಬಿ ರೈಡ್ ಆಗುತ್ತೆ. ನೀವು ಒಂದು ಕೋಟಿ ರೂ ಹಣ ಕೊಟ್ಟರೆ ರೈಡ್ ಆಗಲ್ಲ. ನನ್ನ ಅಕೌಂಟ್​ಗೆ ಹಣ ಹಾಕಿ ಎಂದು ಹೆದರಿಸಿದ್ದ. ಈ ಕುರಿತು ಶಾಸಕರು ಗೃಹ ಸಚಿವರು ಮತ್ತು ಮುಖ್ಯಮಂತ್ರಿಗೆ ದೂರು ನೀಡಿದ್ದು, ಮಡಿಕೇರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

accused
ಆರೋಪಿ ಬಂಧನ

By

Published : Jan 13, 2022, 4:42 PM IST

ಕೊಡಗು: ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಮನೆ ಮೇಲೆ ಎಸಿಬಿ ದಾಳಿ ಮಾಡುವುದಾಗಿ ಬೆದರಿಸಿ ಹಣದ ಬೇಡಿಕೆ ಇಟ್ಟಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತುಮಕೂರು ಜಿಲ್ಲೆಯ ಕೊರಟಗೇರಿಯ ಆನಂದ್ ಬಂಧಿತ ಆರೋಪಿ.

ಕೆಲ ದಿನಗಳ ಹಿಂದೆ ಶಾಸಕ‌ ಕೆ.ಜಿ.ಬೋಪಯ್ಯ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ನಿಮ್ಮ ಮೇಲೆ ಎಸಿಬಿ ರೈಡ್ ಆಗುತ್ತೆ. ನೀವು ಒಂದು ಕೋಟಿ ರೂ ಹಣ ಕೊಟ್ಟರೆ ರೈಡ್ ಆಗಲ್ಲ. ನನ್ನ ಅಕೌಂಟ್​ಗೆ ಹಣ ಹಾಕಿ ಎಂದು ಹೆದರಿಸಿದ್ದ. ಈ ಕುರಿತು ಶಾಸಕರು ಗೃಹ ಸಚಿವರು ಮತ್ತು ಮುಖ್ಯಮಂತ್ರಿಗೆ ದೂರು ನೀಡಿದ್ದು, ಮಡಿಕೇರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಇದೀಗ ಮಡಿಕೇರಿ ಪೊಲೀಸರು ಆರೋಪಿಯನ್ನು ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಬಂಧಿಸಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿ ಶಾಸಕರಿಗೆ ಕರೆ ಮಾಡಿ ಆಂಧ್ರದಲ್ಲಿ ತಲೆಮರೆಸಿಕೊಂಡಿದ್ದ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಮಂತ್ರಿ ಮಾಲ್ ತೆರಿಗೆ ವಿವಾದ: ಸಿವಿಲ್ ದಾವೆ ದಾಖಲಿಸಲು ಬಿಬಿಎಂಪಿಗೆ ಹೈಕೋರ್ಟ್ ಸಲಹೆ

For All Latest Updates

TAGGED:

ABOUT THE AUTHOR

...view details