ಕರ್ನಾಟಕ

karnataka

ETV Bharat / state

ಅಮೆರಿಕದಲ್ಲಿ ವೈದ್ಯನಾಗಿ ಕೊರೊನಾ ವಿರುದ್ಧ ಹೋರಾಟ: ಭಾರತೀಯರಿಗೆ ಸಂದೇಶ ಕಳುಹಿಸಿದ ಅಪ್ಪಚ್ಚು ರಂಜನ್ ಪುತ್ರ..! - ಕೊರೊನಾ ಬಗ್ಗೆ ‌ಜನರಿಗೆ ಕಿವಿಮಾತು ಹೇಳಿದ ಕಾರ್ಯಪ್ಪ

ಅಮೆರಿಕದಲ್ಲಿ ವೈದ್ಯರಾಗಿರುವ ಶಾಸಕ ಅಪ್ಪಚ್ಚು ರಂಜನ್ ಪುತ್ರ ಕಾರ್ಯಪ್ಪ ಭಾರತೀಯರಿಗೆ ಕೊರೊನಾ ಬಗ್ಗೆ ಮುಂಜಾಗ್ರತೆ ವಹಿಸುವಂತೆ ಹೇಳಿದ್ದಾರೆ.

Karyappa
ಕಾರ್ಯಪ್ಪ

By

Published : Apr 5, 2020, 12:08 PM IST

ಕೊಡಗು: ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ವೈದ್ಯರಾಗಿರುವ ಶಾಸಕ ಅಪ್ಪಚ್ಚು ರಂಜನ್ ಪುತ್ರ ಕಾರ್ಯಪ್ಪ ಜನತೆಗೆ ಕಿವಿಮಾತು ಹೇಳಿದ್ದಾರೆ.

ಕೊರೊನಾ ಬಗ್ಗೆ ಅಪ್ಪಚ್ಚು ರಂಜನ್ ಪುತ್ರ ಕಿವಿಮಾತು

ಅಮೆರಿಕದಿಂದ ವಿಡಿಯೋ ಸಂದೇಶ ಕಳುಹಿಸಿರುವ ರಂಜನ್ ಕಾರ್ಯಪ್ಪ, ಕೊರೊನಾ ದೇಶದ ಆರ್ಥಿಕತೆ ಮತ್ತು ಕುಟುಂಬಗಳನ್ನು ನಾಶ ಮಾಡಿದೆ. ಆದರೆ ಅಮೆರಿಕ ಮತ್ತು ಯೂರೋಪ್​​ಗೆ ಹೋಲಿಸಿದರೆ ಭಾರತ ಉತ್ತಮವಾಗಿದೆ. ಇಂತಹ ಸಂದರ್ಭದಲ್ಲಿ ಕಠಿಣ ಕ್ರಮದ ಅಗತ್ಯವಿದೆ. ಅದಕ್ಕಾಗಿ ದೇಶವನ್ನು ಲಾಕ್‍ಡೌನ್ ಮಾಡಲಾಗಿದೆ. ಇದಕ್ಕಾಗಿ ಜನರು ಮನೆಯಲ್ಲೇ ಇರಿ ಆರೋಗ್ಯವಾಗಿ ಇರಿ ಇದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯವಿದೆ ಎಂದಿದ್ದಾರೆ.

ಅಲ್ಲದೇ ಶಾಪಿಂಗ್​​ಗೆ​ ಹೋದಾಗ 6 ಅಡಿ ಅಂತರ ಕಾಯ್ದುಕೊಳ್ಳಿ. ಮನೆಯಲ್ಲಿ ಶ್ವಾಶಕೋಶದ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ವ್ಯಾಯಾಮಗಳನ್ನು ಮಾಡುವಂತೆ ಜನರಿಗೆ ಕಿವಿಮಾತು ಹೇಳಿದ್ದಾರೆ.

ABOUT THE AUTHOR

...view details