ಕೊಡಗು: ಗಾಂಜಾ ಮಾರಾಟ ದಂಧೆ ಹೊಸದೇನು ಅಲ್ಲ, ಹಿಂದಿನಿಂದಲೂ ಗಾಂಜಾ ಮಾರಾಟ ತುಂಬಾ ಇದೆ. ಆದರೆ, ಪೊಲೀಸ್ ಇಲಾಖೆಯ ಕೆಲವು ಅಧಿಕಾರಿಗಳು ಕಳ್ಳರಿದ್ದಾರೆ. ಅಂತವರು ಮಾಮೂಲು ಪಡೆದು ಪ್ರಕರಣಗಳನ್ನು ಮುಚ್ಚಿ ಹಾಕುತ್ತಿದ್ದಾರೆ ಎಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ಪೊಲೀಸ್ ಇಲಾಖೆ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಕೆಲ ಪೊಲೀಸ್ ಅಧಿಕಾರಿಗಳು ಕಳ್ಳರಿದ್ದಾರೆ: ಶಾಸಕ ಅಪ್ಪಚ್ಚು ರಂಜನ್ ಆರೋಪ - kodagu latest news
ಮಾದಕ ವಸ್ತುಗಳ ಮಾರಾಟ ಮೊದಲಿನಿಂದಲೂ ಇದೆ. ಇದರಲ್ಲಿ ಪೊಲೀಸ್ ಅಧಿಕಾರಿಗಳ ಪಾಲು ಇದೆ ಎಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಆರೋಪಿಸಿದರು.
ಶಾಸಕ ಎಂ.ಪಿ.ಅಪ್ಪಚ್ಚು ರಂಜನ್
ಗಾಂಜಾ ಮಾರಾಟ ಕೊಡಗಿನಲ್ಲಿ ಹೊಸದೇನು ಅಲ್ಲ. ಪೊಲೀಸರು ಮಾತ್ರ ಸುಮ್ಮನಾಗಿದ್ದು, ಯಾಕೆ ? ವಿರಾಜಪೇಟೆ, ಸೋಮವಾರಪೇಟೆ ಮತ್ತು ಕುಶಾಲನಗರಗಳಲ್ಲಿ ಗಾಂಜಾ ಮಾರಾಟ ನಡೆಯುತ್ತಿದೆ. ಇದನ್ನು ಸರ್ಕಾರ ಮಟ್ಟಹಾಕುತ್ತದೆ ಎಂದರು.
ಯಾರೆಲ್ಲಾ ಗಾಂಜಾ ಮಾರಾಟ ಅಥವಾ ಡ್ರಗ್ಸ್ ಮಾರಾಟ ಮಾಡುತ್ತಿದ್ದಾರೋ ಅಂತವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಜೈಲಿಗೆ ಕಳುಹಿಸಬೇಕು. ಇಲ್ಲದಿದ್ದರೆ ಅವರಿ ಬುದ್ಧಿ ಕಲಿಯುವುದಿಲ್ಲ ಎಂದು ಹೇಳಿದರು.