ಕರ್ನಾಟಕ

karnataka

ETV Bharat / state

ಕೊರೊನಾ ಚಿಕಿತ್ಸೆ, ಮುಂಜಾಗ್ರತಾ ಕ್ರಮಗಳ ಬಗ್ಗೆ ಶಾಸಕ ಅಪ್ಪಚ್ಚು ರಂಜನ್ ಪರಿಶೀಲನೆ - MLA appacchi ranjan visits Covid patient ward

ಕೊಡಗಿನಲ್ಲಿ ಬಹಳಷ್ಟು ಸೋಂಕಿತರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಲ್ಲಿನ ವೈದ್ಯರು ಉತ್ತಮವಾದ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಶಾಸಕ ಎಂ ಪಿ ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.

mla-appacchu-ranjan-visits-corona-patients-room-in-kodagu
ಕೊರೊನಾ ಸೋಂಕಿತರ ಕೊಠಡಿಗೆ ಶಾಸಕ ಅಪ್ಪಚ್ಚು ರಂಜನ್ ಭೇಟಿ, ಪರಿಶೀಲನೆ

By

Published : May 6, 2021, 5:24 PM IST

ಕೊಡಗು: ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಉತ್ತರ ಕೊಡಗಿನ ಎಲ್ಲಾ ಕೋವಿಡ್ ಸೆಂಟರ್​ಗಳು ಮತ್ತು ಗಡಿ ಭಾಗಗಳಿಗೆ ಭೇಟಿ ನೀಡಿ ಸೌಲಭ್ಯ ಮತ್ತು ಆಸ್ಪತ್ರೆ ವೈದ್ಯರು, ಸಿಬ್ಬಂದಿ, ರೋಗಿಗಳು ಮತ್ತು ಚೆಕ್ ಪೋಸ್ಟ್​ಗಳಲ್ಲಿ ಪೊಲೀಸ್​ ಸಿಬ್ಬಂದಿ ಕುಂದುಕೊರತೆಗಳನ್ನು ವಿಚಾರಿಸಿ ಪರಿಶೀಲನೆ ನಡೆಸಿದರು.

ಅಧಿಕಾರಿಗಳ ಜೊತೆಯಲ್ಲಿ ಚರ್ಚೆ ನಡೆಸಿದ ನಂತರ, ಶಿರಾಂಗಾಲ ಆಸ್ಪತ್ರೆ, ಕೊಡ್ಲಿಪೇಟೆ ಆಸ್ಪತ್ರೆ, ಗೌಡಳ್ಳಿ ಆಸ್ಪತ್ರೆ, ಕುಶಾಲನಗರದ ಸಮೀಪದ ಕೂಡಿಗೆಯ ಮೊರಾರ್ಜಿ ವಸತಿ ಶಾಲೆ, ಮಾದಪುರ ಕೋವಿಡ್ ಕೇಂದ್ರಗಳಿಗೆ ಪಿಪಿಇ ಕಿಟ್ ಧರಿಸಿ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ನಂತರ ಸೋಂಕಿತರ ಜೊತೆಯಲ್ಲಿ ಮಾತನಾಡಿ, ಅವರಿಗೆ ಮಾನಸಿಕವಾಗಿ ಧೈರ್ಯ ತುಂಬುವ ಕೆಲಸ ಮಾಡಿದರು.

ಕೊರೊನಾ ಸೋಂಕಿತರ ಕೊಠಡಿಗೆ ಶಾಸಕ ಅಪ್ಪಚ್ಚು ರಂಜನ್ ಭೇಟಿ, ಪರಿಶೀಲನೆ

ಈ ಕುರಿತು ಮಾತನಾಡಿದ ಶಾಸಕರು, ಕಳೆದ ಬಾರಿಗೆ ಹೋಲಿಸಿದರೆ, ಈ ಬಾರಿ ಕೊಡಗಿನಲ್ಲಿ ಕೋವಿಡ್ -19 ಅತಿಯಾಗಿದೆ. ಕೆಲಸದ ನಿಮಿತ್ತವಾಗಿ ನಗರದಲ್ಲಿ ವಾಸಿಸುತ್ತಿದ್ದ ಜನರು ಲಾಕ್​ಡೌನ್​ ಘೋಷಣೆ ಆದ ಕೂಡಲೇ ಜಿಲ್ಲೆಗೆ ಪುನಃ ಆಗಮಿಸಿ ಕೊರೊನಾ ಹೆಚ್ಚಾಗಲು ಕಾರಣವಾಗಿದ್ದಾರೆ. ಕೊಡಗಿನಲ್ಲಿ ಬಹಳಷ್ಟು ಸೋಂಕಿತರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಲ್ಲಿನ ವೈದ್ಯರು ಉತ್ತಮವಾದ ಚಿಕಿತ್ಸೆ ನೀಡುತ್ತಿದ್ದಾರೆ. ಆಹಾರ ಪದಾರ್ಥಗಳೂ ಗುಣಮಟ್ಟದ್ದಾಗಿದೆ. ಹೀಗಾಗಿ ಯಾರೂ ಭಯ ಪಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.

ಕೊರೊನಾ ತಡೆಯಲು ಜಿಲ್ಲಾಡಳಿತ ಕರ್ಫ್ಯೂ ಜಾರಿ ಮಾಡಿದೆ. ಇದನ್ನು ಜನರು ಪಾಲಿಸಿದ್ದೇ ಆದರೆ ರೋಗವನ್ನು ತಡೆಯಬಹುದು. ಮಂಗಳವಾರ ಮತ್ತು ಶುಕ್ರವಾರ ಬೆಳಗ್ಗೆ 6 ರಿಂದ 10 ರ ತನಕ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದ್ದು, ಬಾಕಿ ದಿನಗಳು ಕೊಡಗು ಜಿಲ್ಲೆ ಸಂಪೂರ್ಣ ಬಂದ್ ಮಾಡಲಾಗುತ್ತದೆ. ಜನರು ದಯವಿಟ್ಟು ಸಹಕರಿಸಿ ಎಂದು ಮನವಿ ಮಾಡಿದರು.

ಓದಿ:ರಾಜ್ಯದಲ್ಲಿ ಜನತಾ ಲಾಕ್​ಡೌನ್ ಫೇಲ್, ಸಂಪೂರ್ಣ ಲಾಕ್​ಡೌನ್ ಬಗ್ಗೆ ಸುಧಾಕರ್ ಸುಳಿವು

For All Latest Updates

TAGGED:

ABOUT THE AUTHOR

...view details