ಕರ್ನಾಟಕ

karnataka

ETV Bharat / state

ಧರ್ಮೇಗೌಡರ ಆತ್ಮಹತ್ಯೆ ದುರದೃಷ್ಟಕರ: ಶಾಸಕ ಅಪ್ಪಚ್ಚು ರಂಜನ್

ಉಪಸಭಾಪತಿ ಎಸ್.ಎಲ್.ಧರ್ಮೇಗೌಡರ ಆತ್ಮಹತ್ಯೆ ವೈಯಕ್ತಿಕವಾಗಿ ನೋವುಂಟು ಮಾಡಿದೆ. ಭಗವಂತ ಅವರ ಕುಟುಂಬಕ್ಕೆ ದುಃಖ ಸಹಿಸಿಕೊಳ್ಳುವ ಶಕ್ತಿ ಕೊಡಲಿ. ಸಭಾಪತಿ ಪೀಠಕ್ಕಾಗಿ ಸದನದಲ್ಲಿ ಇತ್ತೀಚಿಗೆ ನಡೆದಿದ್ದ ಘಟನೆಯಿಂದ ಅವರಿಗೆ ನೋವಾಗಿತ್ತು ಎಂದಿದ್ದಾರೆ.

MLA Appacchu Ranjan
ಶಾಸಕ ಅಪ್ಪಚ್ಚು ರಂಜನ್​

By

Published : Dec 29, 2020, 3:04 PM IST

Updated : Dec 29, 2020, 3:12 PM IST

ಮಡಿಕೇರಿ (ಕೊಡಗು):ಕೆಲವರು ವೀಕ್‌ಮೈಂಡ್ ಇರುತ್ತಾರೆ. ಮನಸ್ಸಿಗೆ ನೋವಾಗುವಂತಹ ಘಟನೆಗಳು ನಡೆದಾಗ ಸಹಿಸಿಕೊಳ್ಳುವುದಿಲ್ಲ ಅದು ಧರ್ಮೇಗೌಡರ ವಿಷಯದಲ್ಲೂ ನಡೆದಿದೆ ಎಂದು ಶಾಸಕ ಅಪ್ಪಚ್ಚು ರಂಜನ್ ಬೇಸರ ವ್ಯಕ್ತಪಡಿಸಿದ್ದಾರೆ.

ಮಡಿಕೇರಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಉಪಸಭಾಪತಿ ಎಸ್.ಎಲ್.ಧರ್ಮೇಗೌಡರ ಆತ್ಮಹತ್ಯೆ ವೈಯಕ್ತಿಕವಾಗಿ ನೋವುಂಟು ಮಾಡಿದೆ. ಭಗವಂತ ಅವರ ಕುಟುಂಬಕ್ಕೆ ದುಃಖ ಸಹಿಸಿಕೊಳ್ಳುವ ಶಕ್ತಿ ಕೊಡಲಿ. ಸಭಾಪತಿ ಪೀಠಕ್ಕಾಗಿ ಸದನದಲ್ಲಿ ಇತ್ತೀಚೆಗೆ ನಡೆದಿದ್ದ ಘಟನೆಯಿಂದ ಅವರಿಗೆ ನೋವಾಗಿತ್ತು.

ಧರ್ಮೇಗೌಡರ ಆತ್ಮಹತ್ಯೆ ಕುರಿತು ಶಾಸಕ ಅಪ್ಪಚ್ಚು ರಂಜನ್ ಪ್ರತಿಕ್ರಿಯೆ

ಇನ್ಮುಂದೆ ಇಂತಹ ಘಟನೆಗಳು ಮರುಕಳಿಸಬಾರದು‌. ಸಭಾಪತಿ ಸ್ಥಾನದ ಬಗ್ಗೆ ಒಮ್ಮೆ ಅವಿಶ್ವಾಸ ನಿರ್ಣಯವಾದ ಮೇಲೆ ಆ ಪೀಠದಲ್ಲಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು ಮುಂದುವರಿಯಬಾರದಿತ್ತು. ಹಿಂದೊಮ್ಮೆ ನಮ್ಮ ಪಕ್ಷದ ಸಭಾಪತಿಗೆ ಅವಿಶ್ವಾಸ ಗೊತ್ತುವಳಿ ನಿರ್ಣಯವಾದ ತಕ್ಷಣದಲ್ಲೇ ಶಂಕರ‌ಮೂರ್ತಿ ಅವರು ಸ್ಥಾನವನ್ನು ತ್ಯಾಗ ಮಾಡಿದರು ಎಂದು ಕಾಂಗ್ರೆಸ್‌ನ ಪರಿಷತ್ ಸದಸ್ಯರನ್ನು ಕುಟುಕಿದರು‌.

ಇದನ್ನೂ ಓದಿ:ಧರ್ಮೇಗೌಡರ ಆತ್ಮಹತ್ಯೆಯಿಂದ ನೋವಾಗಿದೆ, ಈ ಬಗ್ಗೆ ತನಿಖೆಯಾಗಲಿ: ಸಚಿವ ಅಶೋಕ್

Last Updated : Dec 29, 2020, 3:12 PM IST

ABOUT THE AUTHOR

...view details