ಕೊಡಗು :ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎನ್ನುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರದ್ದು ಹಿಟ್ ಅಂಡ್ ರನ್ ಕೆಲಸ ಎಂದು ವಸತಿ ಸಚಿವ ವಿ ಸೋಮಣ್ಣ ತಿರುಗೇಟು ನೀಡಿದ್ದಾರೆ.
ಅವ್ಯವಹಾರ ಆಗಿದ್ರೆ ಸಿದ್ದರಾಮಯ್ಯ ದಾಖಲೆ ಕೊಡಲಿ.. ವಸತಿ ಸಚಿವ ವಿ ಸೋಮಣ್ಣ
ಅವಶ್ಯಕವಿದ್ರೆ ಮಾತ್ರ ಜನ ಹೊರಗೆ ಬನ್ನಿ. ಇಲ್ಲದಿದ್ರೆ ಮನೆಯಲ್ಲೇ ಸುರಕ್ಷಿತವಾಗಿರಿ. ಬೆಂಗಳೂರಿನಲ್ಲಿ ನಿರೀಕ್ಷೆ ಮಾಡದಷ್ಟು ಪಾಸಿಟಿವ್ ಪ್ರಕರಣ ಬಂದಿವೆ. ಕೊರೊನಾ ನಿಯಂತ್ರಣಕ್ಕೆ ಸರ್ಕಾರ 8 ತಂಡ ರಚಿಸಿದೆ..
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರದಲ್ಲಿ ಮೆಡಿಕಲ್ ಕಿಟ್‌ಗಳ ಖರೀದಿಯಲ್ಲಿ ಒಂದು ರೂಪಾಯಿ ಕೂಡ ಅವ್ಯವಹಾರ ನಡೆದಿಲ್ಲ. ಅವ್ಯವಹಾರ ಆಗಿದ್ರೆ ಸಿದ್ದರಾಮಯ್ಯ ದಾಖಲೆ ಕೊಡಲಿ. ಸಿಎಂ ಕೂಡ ದಾಖಲೆ ಸಹಿತ ಸಭೆಗೆ ಬರುವಂತೆ ಆಹ್ವಾನಿಸಿದ್ದರು. ಆದರೆ, ಅವರು ಸಭೆಗೆ ಬರದೆ ಹಿಟ್ ಅಂಡ್ ರನ್ ಕೆಲಸ ಮಾಡಿದ್ದಾರೆ ಎಂದು ಟಾಂಗ್ ನೀಡಿದರು.
ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿವೆ. ಅವಶ್ಯಕವಿದ್ರೆ ಮಾತ್ರ ಜನ ಹೊರಗೆ ಬನ್ನಿ. ಇಲ್ಲದಿದ್ರೆ ಮನೆಯಲ್ಲೇ ಸುರಕ್ಷಿತವಾಗಿರಿ. ಬೆಂಗಳೂರಿನಲ್ಲಿ ನಿರೀಕ್ಷೆ ಮಾಡದಷ್ಟು ಪಾಸಿಟಿವ್ ಪ್ರಕರಣ ಬಂದಿವೆ. ಕೊರೊನಾ ನಿಯಂತ್ರಣಕ್ಕೆ ಸರ್ಕಾರ 8 ತಂಡ ರಚಿಸಿದೆ. ಇದರ ಜೊತೆಗೆ ಉತ್ತಮ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.