ಕರ್ನಾಟಕ

karnataka

ETV Bharat / state

ಬೆಟ್ಟದ ಮೇಲಿನ ಗೂಡಿನೊಳಗೆ ಶ್ರೀರಾಮುಲು.. ಮನೆ ಕೆಲಸದವನ ಮನೆ, ಮನದೊಳಗೆ ಆರೋಗ್ಯ ಸಚಿವ..

ಮನೆ ಕೆಲಸ ಮಾಡಿಕೊಂಡಿರುವ ಜೀನಿಷ್ ಎಂಬ ಯುವಕನ ಮನೆಗೆ ಭೇಟಿ ನೀಡಿದ ಸಚಿವರು, ಕುಟುಂಬದ ಸದಸ್ಯರೊಂದಿಗೆ ಕಾಫಿ ಸೇವಿಸಿ ಆತನ ಪೋಷಕರೊಂದಿಗೆ ಮಾತನಾಡಿದರು.

Minister Sreeramalu
ಮನೆ ಕೆಲಸದವನ ಮನೆಗೆ ಭೇಟಿ ನೀಡಿದ ಸಚಿವ ಶ್ರೀರಾಮಲು

By

Published : Jun 9, 2020, 9:53 PM IST

ವಿರಾಜಪೇಟೆ: ತಾಲೂಕಿನ ನೆಹರು ನಗರದಲ್ಲಿರುವ ತಮ್ಮ ಮನೆ ಕೆಲಸದವನ ಮನೆಗೆ ಅರೋಗ್ಯ ಸಚಿವ ಬಿ ಶ್ರೀರಾಮಲು ಇಂದು ಭೇಟಿ ನೀಡಿದರು.

ಮನೆ ಕೆಲಸದವನ ಮನೆಯೊಳಗೆ ಸಚಿವ ಶ್ರೀರಾಮಲು..

ತಮ್ಮ ಮನೆಯಲ್ಲಿ ಆನೇಕ ವರ್ಷಗಳಿಂದ ಮನೆ ಕೆಲಸ ಮಾಡಿಕೊಂಡಿರುವ ಜೀನಿಷ್ ಎಂಬ ಯುವಕನ ಮನೆಗೆ ಭೇಟಿ ನೀಡಿದ ಸಚಿವರು, ಕುಟುಂಬದ ಸದಸ್ಯರೊಂದಿಗೆ ಕಾಫಿ ಸೇವಿಸಿ ಆತನ ಪೋಷಕರೊಂದಿಗೆ ಮಾತನಾಡಿದರು. ನಂತರ ಈಟಿವಿ ಭಾರತದೊಂದಿಗೆ ಮಾತನಾಡಿದ ಜಿನೀಷ್ ಅವರು, ಸಚಿವರು ಇಂದು ನನ್ನ ಮನೆಗೆ ಭೇಟಿ ನೀಡಿರುವುದು ನನಗೆ ಮತ್ತು ನಮ್ಮ ಮನೆಯವರಿಗೆ ತುಂಬಾ ಸಂತೋಷವಾಗಿದೆ. ಅವರು ತುಂಬಾ ಸರಳ ಜೀವಿ‌ ಹಾಗೂ ಎಲ್ಲರನ್ನೂ ಪ್ರೀತಿ, ಗೌರವದಿಂದ ಕಾಣುತ್ತಾರೆ ಎಂದರು.

ಸಚಿವ ಶ್ರೀರಾಮಲು ಮಾತನಾಡಿ, ಜೀನಿಷ್ ಅವರು ನನ್ನಲ್ಲಿ ಅನೇಕ ಬಾರಿ ಮನೆಗೆ ಬರಲು ಕೋರಿ ಕೊಂಡಿದ್ದರು. ಕೊಡಗಿಗೆ ಬಂದರೆ ನಿಮ್ಮ ಮನೆಗೆ ಬಂದೇ ಬರುತ್ತೇನೆ ಎಂದು ಮಾತು ಕೊಟ್ಟಿದ್ದೆ. ಅದರಂತೆ ಇಂದು ಭೇಟಿ ನೀಡಿರುವೆ. ಇದೊಂದು ಖಾಸಗಿ ಭೇಟಿ ಮಾತ್ರ. ಇವರು ಬೆಟ್ಟದ ಮೇಲೆ ಮನೆ ನಿರ್ಮಾಣ ಮಾಡಿ ಬದುಕುತ್ತಿದ್ದಾರೆ. ಇಲ್ಲಿಗೆ ಬಂದು ಒಳ್ಳೆಯ ಅನುಭವವಾಗಿದೆ ಎಂದು ಸಚಿವರು ತಿಳಿಸಿದರು.

ABOUT THE AUTHOR

...view details