ಕರ್ನಾಟಕ

karnataka

ETV Bharat / state

ಕಣ್ಮರೆ ಆದವರನ್ನು ಹುಡುಕುವುದಷ್ಟೇ ನಮ್ಮ ಉದ್ದೇಶ: ಸಚಿವ ವಿ.ಸೋಮಣ್ಣ ಸ್ಪಷ್ಟನೆ - ನಾರಾಯಣ ಆಚಾರ್ ಆಸ್ತಿ ಸುದ್ದಿ

ಕಣ್ಮರೆ ಆದವರನ್ನು ಹುಡುಕುವುದೇ ನಮ್ಮ ಮುಖ್ಯ ಉದ್ದೇಶ ಎಂದು ಸಚಿವ ವಿ. ಸೋಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ.

Narayana Achar Property, Narayana Achar Property issue, Narayana Achar Property news, Narayana Achar Property latest news, Bramhagiri hill collapse, Bramhagiri hill collapse news,  ನಾರಾಯಣ ಆಚಾರ್ ಆಸ್ತಿ, ನಾರಾಯಣ ಆಚಾರ್ ಆಸ್ತಿ ವಿವಾದ, ನಾರಾಯಣ ಆಚಾರ್ ಆಸ್ತಿ ಬಗ್ಗೆ ಸೋಮಣ್ಣ ಪ್ರತಿಕ್ರಿಯೆ,  ನಾರಾಯಣ ಆಚಾರ್ ಆಸ್ತಿ ಸುದ್ದಿ,
ಕಣ್ಮರೆ ಆದವರನ್ನು ಹುಡುಕುವುದಷ್ಟೇ ನಮ್ಮ ಉದ್ದೇಶ ಎಂದು ಸಚಿವ ಸೋಮಣ್ಣ ಹೇಳಿದರು

By

Published : Aug 11, 2020, 2:39 PM IST

ಕೊಡಗು (ತಲಕಾವೇರಿ):ಅವರ ಆಸ್ತಿ ಬಗ್ಗೆ ನಮಗೇನೂ ಗೊತ್ತಿಲ್ಲ. ನಮ್ಮ ಉದ್ದೇಶ ಏನಿದ್ದರೂ ಕಣ್ಮರೆಯಾದವರನ್ನು ಹುಡುಕುವುದಷ್ಟೇ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸ್ಪಷ್ಟಪಡಿಸಿದ್ದಾರೆ.

ಕಣ್ಮರೆ ಆದವರನ್ನು ಹುಡುಕುವುದಷ್ಟೇ ನಮ್ಮ ಉದ್ದೇಶ ಎಂದು ಸಚಿವ ಸೋಮಣ್ಣ ಹೇಳಿದರು

ಬೆಳಗ್ಗೆ 8 ಗಂಟೆಯಿಂದಲೇ ಕಣ್ಮರೆಯಾದವರಿಗೆ ಹುಡುಕಾಟ ಪ್ರಾರಂಭಿಸಿದ್ದೇವೆ. ಈಗಾಗಲೇ ನಾರಾಯಣ ಆಚಾರ್ ಬಳಸುತ್ತಿದ್ದ ಎರಡು ಕಾರುಗಳು ಹಾಗೂ ಅವರ ಸಾಕು ನಾಯಿ ಪತ್ತೆಯಾಗಿದೆ ಎಂದರು.

ನಿನ್ನೆಯಷ್ಟೇ ವಿದೇಶಗಳಿಂದ ಬಂದಿದ್ದ ನಾರಾಯಣ ಆಚಾರ್ ಮಕ್ಕಳನ್ನು ಬೆಂಗಳೂರಿನಿಂದ ಕರೆತಂದಿದ್ದ ಕಾರು ಚಾಲಕನಿಗೆ ಕೊರೊನಾ ಪಾಸಿಟಿವ್ ಇರುವುದರಿಂದ 7 ದಿನಗಳು ಕ್ವಾರಂಟೈನ್‌ನಲ್ಲಿ ಇರಲು ಹೇಳಿದ್ದೇವೆ. ಇದಕ್ಕೆ ಅವರೂ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹಾಗೆಯೇ ಮೂರು ದಿನಗಳ ಹಿಂದೆ ಸಿಕ್ಕಿರುವ ಆನಂದತೀರ್ಥ ಸ್ವಾಮೀಜಿ ಅವರ ಮೃತದೇಹದ ಅಂತ್ಯ ಸಂಸ್ಕಾರವನ್ನು ಇಂದು ನೆರವೇರಿಸುವುದಾಗಿ ಅವರು ಹೇಳಿದರು.

ABOUT THE AUTHOR

...view details