ಕೊಡಗು: ಜಿಲ್ಲೆಯಲ್ಲಿ ಒಂದು ವಾರದಲ್ಲಿ ಶೇ 8ರಷ್ಟು ಪಾಸಿಟಿವಿಟಿ ದರ ಇರುವುದು ಕೊಂಚ ಆತಂಕ ತಂದಿದೆ. ಸಾವಿನ ಪ್ರಮಾಣ ಕಡಿಮೆ ಇದೆ. ಆದ್ರೆ, ಪಾಸಿಟಿವ್ ರೇಟ್ ಕಡಿಮೆಯಾಗುವವರೆಗೂ ಜಿಲ್ಲೆಯಲ್ಲಿ ಕೋವಿಡ್ ನಿಯಮ ಪಾಲನೆ ಮಾಡಲೇಬೇಕು ಸಚಿವ ಡಾ. ಕೆ.ಸುಧಾಕರ್ ಹೇಳಿದರು.
ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಚಿವ ಡಾ. ಕೆ.ಸುಧಾಕರ್ ಕೋವಿಡ್ ನಿರ್ಬಂಧ ಸಂಬಂಧ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಚಿವರು, ಜಿಲ್ಲೆಗೆ ಬರುವ ಪ್ರವಾಸಿಗರನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದರು. ಹೋಂಸ್ಟೇ, ರೆಸಾರ್ಟ್ಗಳಿಗೆ ಹೊರ ಜಿಲ್ಲೆಗಳಿಂದ ಪ್ರವಾಸಿಗರು ಬರುತ್ತಿರುವ ಮಾಹಿತಿ ಇದೆ. ಇಂಥವರನ್ನು ಸದ್ಯಕ್ಕೆ ಕೊಡಗಿನಲ್ಲಿ ನಿರ್ಬಂಧಿಸಬೇಕಿದೆ.
ಹೊರಗಿನ ಪ್ರವಾಸಿಗರ ಬಗ್ಗೆ ಕಟ್ಟೆಚ್ಚರ ವಹಿಸಬೇಕು. ಜಿಲ್ಲೆಯಲ್ಲಿ ನಿತ್ಯ 4,000 ಲಸಿಕೆ ನೀಡಿಕೆಗೆ ಕ್ರಮ ತೆಗೆದುಕೊಳ್ಳಲಾಗಿದ್ದು, ಲಸಿಕೆ ಕೊರತೆ ಆಗದಂತೆ ಗಮನ ನೀಡಲಾಗುತ್ತದೆ. ಸರ್ಕಾರ ನೀಡಿದ ಗುರಿಯನ್ನು ಲಸಿಕೆ ನೀಡಿಕೆಯಲ್ಲಿ ಕೊಡಗು ತಲುಪಿದೆ ಎಂದರು.
ರಾಜ್ಯಕ್ಕೆ ಇಂದು ಅಧಿಕ ಲಸಿಕೆ ಪೂರೈಕೆಯಾಗಲಿದೆ. ಕೊಡಗಿನಲ್ಲಿ ಮರಣ ಪ್ರಮಾಣ ಮತ್ತು ರಾಜ್ಯ ವರದಿಯಲ್ಲಿ ಅಂಕಿ ಅಂಶ ವ್ಯತ್ಯಯವಾಗಿರುವ ಹಿನ್ನೆಲೆಯಲ್ಲಿ ಕೂಡಲೇ ಇದನ್ನು ಸರಿಪಡಿಸುವ ವಿಶ್ವಾಸವನ್ನು ಡಾ. ಸುಧಾಕರ್ ವ್ಯಕ್ತಪಡಿಸಿದರು.
ಇದನ್ನೂ ಓದಿ: ಮೂಡಬಿದಿರೆಯ ಹೋಟೆಲ್ನಲ್ಲಿ ಕೇಳಿ ಬಂದ ಅಶ್ಲೀಲ ವಿಡಿಯೋ ಶಬ್ದ: ಗ್ರಾಹಕನಿಗೆ ಬಿಸಿ ಬಿಸಿ ಕಜ್ಜಾಯ!