ಕರ್ನಾಟಕ

karnataka

By

Published : May 5, 2020, 9:12 PM IST

ETV Bharat / state

ರೈತರು ಯಾವುದೇ ಕಾರಣಕ್ಕೂ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು: ಸಚಿವ ಬಿ‌‌.ಸಿ.ಪಾಟೀಲ್​

ರೈತರು ಯಾವುದೇ ಕಾರಣಕ್ಕೂ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಕೃಷಿ ಚಟುವಟಿಕೆಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಸರ್ಕಾರ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಕೃಷಿ ಸಚಿವ ಬಿ‌‌.ಸಿ.ಪಾಟೀಲ್ ಹೇಳಿದರು.

ಸಚಿವ ಬಿ‌‌.ಸಿ.ಪಾಟೀಲ್
ಸಚಿವ ಬಿ‌‌.ಸಿ.ಪಾಟೀಲ್

ಕೊಡಗು: ಲಾಕ್‌ಡೌನ್ ಜಾರಿಯಲ್ಲಿದ್ದರೂ ಕೃಷಿ ಚಟುವಟಿಕೆಗಳಿಗೆ ಯಾವುದೇ ರೀತಿಯ ತೊಂದರೆಗಳು ಆಗದಂತೆ ಸರ್ಕಾರ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಕೃಷಿ ಸಚಿವ ಬಿ‌‌.ಸಿ.ಪಾಟೀಲ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಲಾಕ್‍ಡೌನ್ ಸಂಪೂರ್ಣ ಹಿಂಪಡೆದಿಲ್ಲ.‌ ರೈತರು ಯಾವುದೇ ಕಾರಣಕ್ಕೂ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಈಗಾಗಲೇ ಮುಂಗಾರು ಬಿತ್ತನೆಗೆ ಸರ್ಕಾರ ಸಜ್ಜಾಗಿದೆ. ಮುಂದಿನ ದಿನಗಳಲ್ಲಿ ರೈತರಿಗೆ ಕಿಸಾನ್ ಕಾರ್ಡ್ ಕೊಡಲಾಗುವುದು ಎಂದು ಹೇಳಿದರು.

ಬಡ್ಡಿ ರಹಿತ ಸಾಲ ಮರುಪಾವತಿ ಸಮಯವನ್ನು ಮುಂದೂಡಲಾಗುವುದು. ಕೊಳೆತು ಹೋಗುವ ಆಹಾರ ಧಾನ್ಯಗಳಿಗೆ ಪ್ರೋತ್ಸಾಹ ನೀಡಲಾಗುವುದು. ಹೂ ಬೆಳೆದ ರೈತರಿಗೆ ಮಾತ್ರ ನಷ್ಟಕ್ಕೆ ಪರಿಹಾರ ಸೇರಿದಂತೆ ತರಕಾರಿ ಬೆಳೆ ಹಾಳಾಗಿದ್ದರೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದರು.

ABOUT THE AUTHOR

...view details