ಮಡಿಕೇರಿ:ಕೇಂದ್ರ ಹವಾಮಾನ ಇಲಾಖೆ ನೀಡಿದ ಮುನ್ಸೂಚನೆ ಪ್ರಕಾರ ಜಿಲ್ಲೆಯಲ್ಲಿ ಆಗಸ್ಟ್ 23 ರಂದು ಭಾರಿ ಮಳೆ ಬೀಳಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಕೊಡಗು ಜಿಲ್ಲೆಗೆ ಮತ್ತೆ ಆತಂಕ: ಭಾರಿ ಮಳೆಯ ಮುನ್ಸೂಚನೆ ನೀಡಿತು ಹವಾಮಾನ ಇಲಾಖೆ - ಕೊಡಗಿನಲ್ಲಿ ಭಾರಿ ಮಳೆಯ ಮುನ್ಸೂಚನೆ
ಆಗಸ್ಟ್ 22(ಇಂದು) ಹಾಗೂ 23 ರಂದು ಜಿಲ್ಲೆಯಲ್ಲಿ ಮಳೆ ಪ್ರಮಾಣ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿತ್ತು. ಹೀಗಾಗಿ ನಾಳೆ ಮಳೆ ಪ್ರಮಾಣ ಚುರುಕಾಗುವ ಸಾಧ್ಯತೆಯಿದ್ದು, ಜನತೆ ಎಚ್ಚರಿಕೆ ವಹಿಸಬೇಕೆಂದು ಕೊಡಗು ಜಿಲ್ಲಾಡಳಿತ ಹೇಳಿದೆ.
![ಕೊಡಗು ಜಿಲ್ಲೆಗೆ ಮತ್ತೆ ಆತಂಕ: ಭಾರಿ ಮಳೆಯ ಮುನ್ಸೂಚನೆ ನೀಡಿತು ಹವಾಮಾನ ಇಲಾಖೆ](https://etvbharatimages.akamaized.net/etvbharat/prod-images/768-512-4212837-thumbnail-3x2-megha.jpg)
ಕೊಡಗಿನಲ್ಲಿ ಭಾರಿ ಮಳೆಯ ಮುನ್ಸೂಚನೆ
ಆಗಸ್ಟ್ 22(ಇಂದು) ಹಾಗೂ 23 ರಂದು ಜಿಲ್ಲೆಯಲ್ಲಿ ಮಳೆ ಪ್ರಮಾಣ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿತ್ತು. ಹೀಗಾಗಿ ನಾಳೆ ಮಳೆ ಪ್ರಮಾಣ ಚುರುಕಾಗುವ ಸಾಧ್ಯತೆ ಇದ್ದು, ಈಗಾಗಲೇ ಜಿಲ್ಲೆಯಲ್ಲಿ ಸುರಿದಿರುವ ಮಳೆಯಿಂದ ಪ್ರವಾಹ ಉಂಟಾಗಿ ಹಲವೆಡೆ ರಸ್ತೆ ಹಾಗೂ ಭೂ ಕುಸಿತ ಆಗಿರುವುದರಿಂದ ಜನ ಎಚ್ಚರಿಕೆ ವಹಿಸಬೇಕೆಂದು ಜಿಲ್ಲಾಡಳಿತ ಸೂಚಿಸಿದೆ.
ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳು ಎದುರಾದರೆ ತುರ್ತು ದೂರವಾಣಿ ಸಂಖ್ಯೆ 08272-221077 ಸಂಪರ್ಕಿಸಲು ಜಿಲ್ಲಾಧಿಕಾರಿ ಅನೀಸ್ ಕೆ.ಜಾಯ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.