ಕೊಡಗು: ಮೆಡಿಕಲ್ ಸ್ಟೋರ್ಗೆ ಬೆಂಕಿ ಬಿದ್ದು ಅಪಾರ ಪ್ರಮಾಣದ ಮಾತ್ರೆ, ಔಷಧಿ ಸುಟ್ಟು ಕರಕಲಾದ ಘಟನೆ ಜಿಲ್ಲೆಯ ಗೋಣಿಕೊಪ್ಪಲು ಪಟ್ಟಣದಲ್ಲಿ ನಡೆದಿದೆ.
ಅಗ್ನಿ ಅವಘಡ: ಸುಟ್ಟು ಕರಕಲಾದ ಮೆಡಿಕಲ್ ಸ್ಟೋರ್ - ಕೊಡಗು
ಪೊನ್ನಪೇಟೆ ತಾಲೂಕಿನ ಗೋಣಿಕೊಪ್ಪದ ಪಟ್ಟಣದ ಹೃದಯ ಭಾಗದಲ್ಲಿರುವ ಮಾನಸ ಮೆಡಿಕಲ್ ಸ್ಟೋರ್ಗೆ ಬೆಂಕಿ ಬಿದ್ದು ಅಪಾರ ಪ್ರಮಾಣದ ಮಾತ್ರೆ, ಔಷಧಿ ಸುಟ್ಟು ಭಸ್ಮವಾಗಿದೆ.

ಪೊನ್ನಪೇಟೆ ತಾಲೂಕಿನ ಗೋಣಿಕೊಪ್ಪದ ಪಟ್ಟಣದ ಹೃದಯ ಭಾಗದಲ್ಲಿರುವ ಮಾನಸ ಮೆಡಿಕಲ್ ಸ್ಟೋರ್ಗೆ ಮುಂಜಾನೆ 5.30 ಗಂಟೆಗೆ ಬೆಂಕಿ ಬಿದ್ದು ಧಗ ಧಗನೆ ಉರಿದುಹೋಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಅವಘಡದಿಂದ ಲಕ್ಷಾಂತರ ರೂ. ಮೌಲ್ಯದ ಔಷಧಿ ಸುಟ್ಟು ಭಸ್ಮವಾಗಿದೆ.
ಮುಂಜಾನೆ ಬೆಂಕಿ ಬಿದ್ದ ಪರಿಣಾಮ ಜನರು ಯಾರೂ ನೋಡಿಲ್ಲ. ಹೀಗಾಗಿ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ. ಬಳಿಕ ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದು, ಅಷ್ಟರಲ್ಲಿಯೇ ಮೆಡಿಕಲ್ ಸ್ಟೋರ್ನಲ್ಲಿದ್ದ ಔಷಧಿ, ಮಾತ್ರೆ ಸುಟ್ಟು ಕರಕಲಾಗಿವೆ.