ಕೊಡಗು: ಮಾಂಸಪ್ರಿಯರಿಗೆ ಜಿಲ್ಲಾಡಳಿತ ಗುಡ್ ನ್ಯೂಸ್ ಕೊಟ್ಟಿದೆ. ನಾಳೆಯಿಂದ ವಾರದಲ್ಲಿ ಮೂರು ದಿನಗಳು ಮಾಂಸ ಮಾರಾಟಕ್ಕೆ ಅವಕಾಶ ನೀಡಲಾಗಿದೆ.
ವಾರದಲ್ಲಿ ಮೂರು ದಿನ ಮಾತ್ರ ಮಾಂಸ ಮಾರಾಟ: ಕೊಡಗು ಜಿಲ್ಲಾಡಳಿತ ಆದೇಶ - Meat sales three days a week
ಸೋಮವಾರ, ಬುಧವಾರ ಹಾಗೂ ಶುಕ್ರವಾರ 3 ದಿನಗಳು ಮಾಂಸ ಮಾರಾಟಕ್ಕೆ ಕೊಡಗು ಜಿಲ್ಲಾಡಳಿತ ಅವಕಾಶ ನೀಡಿದೆ.
![ವಾರದಲ್ಲಿ ಮೂರು ದಿನ ಮಾತ್ರ ಮಾಂಸ ಮಾರಾಟ: ಕೊಡಗು ಜಿಲ್ಲಾಡಳಿತ ಆದೇಶ Kodagu](https://etvbharatimages.akamaized.net/etvbharat/prod-images/768-512-6759270-1089-6759270-1586672790143.jpg)
ಮೂರು ದಿನಗಳು ಮಾಂಸ ಮಾರಾಟಕ್ಕೆ ಅವಕಾಶ
ಸೋಮವಾರ, ಬುಧವಾರ ಹಾಗೂ ಶುಕ್ರವಾರ ಮಾಂಸ ಮಾರಾಟಕ್ಕೆ ಬೆಳಿಗ್ಗೆ 6 ರಿಂದ 12 ಗಂಟೆವರೆಗೆ ಅವಕಾಶ ಕಲ್ಪಿಸಿದೆ. ಸ್ಥಳೀಯವಾಗಿ ಮೀನು, ಕೋಳಿ ಮಾರಾಟಕ್ಕೂ ಅವಕಾಶ ನೀಡಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಆದೇಶ ಹೊರಡಿಸಿದ್ದಾರೆ.
ವಾರದಲ್ಲಿ ಮೂರು ದಿನಗಳು ಮಾಂಸ ಮಾರಾಟಕ್ಕೆ ಅವಕಾಶ
ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಲಾಕ್‌ಡೌನ್ ಘೊಷಿಸಿ ಕಳೆದ ತಿಂಗಳು 20 ರಿಂದ ಮೀನು, ಮಾಂಸ ಮಾರಾಟ ಮಾಡದಂತೆ ನಿಷೇಧಿಸಲಾಗಿತ್ತು.